ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ ಅಧಿವೇಶನ ಬಹಿಷ್ಕರಿಸಿದ ಟಿಆರ್‌ಎಸ್‌

ರೈತ ವಿರೋಧಿ ಸರ್ಕಾರ: ಆರೋಪ
Last Updated 7 ಡಿಸೆಂಬರ್ 2021, 10:48 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ‘ರೈತ ವಿರೋಧಿ’ ಎಂದು ಆರೋಪಿಸಿರುವ ಟಿಆರ್‌ಎಸ್‌, ಚಳಿಗಾಲದ ಅಧಿವೇಶನದ ಉಳಿದ ಭಾಗಗಳಲ್ಲಿ ಸಂಸತ್ತಿನ ಉಭಯ ಸದನಗಳನ್ನು ಬಹಿಷ್ಕರಿಸುವುದಾಗಿ ಮಂಗಳವಾರ ಘೋಷಿಸಿದೆ.

ರೈತರನ್ನು ಬೆಂಬಲಿಸಿದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಸಂಸದರು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಲೋಕಸಭೆ ಮತ್ತು ರಾಜ್ಯಸಭೆಯಿಂದ ಸಭಾತ್ಯಾಗ ನಡೆಸಿದರು. ಎಲ್ಲಾ ಸಂಸದರು ಕಪ್ಪು ಬಟ್ಟೆ ಧರಿಸಿದ್ದರು.

ಟಿಆರ್‌ಎಸ್‌ ಮುಖಂಡ ಕೇಶವ ರಾವ್ ಅವರು, ರೈತರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ಕೇಂದ್ರ ಸರ್ಕಾರವು ಆಸಕ್ತಿ ತೋರುತ್ತಿಲ್ಲ. ಇದೊಂದು ರೈತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.

ತೆಲಂಗಾಣದಿಂದ ಭಾರತೀಯ ಆಹಾರ ನಿಗಮದಿಂದ ಭತ್ತವನ್ನು ಖರೀದಿಸುವ ವಿಷಯವನ್ನು ಲೋಕಸಭೆಯ ಪಕ್ಷದ ನಾಯಕ ನಾಮಾ ನಾಗೇಶ್ವರ್ ರಾವ್ ಪ್ರಸ್ತಾಪಿಸಿ, ಕನಿಷ್ಠ ಬೆಂಬಲ ಬೆಲೆಗೆ ಮಸೂದೆ ತರಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT