ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಟಿಡಿ: ಉದಯಾಸ್ತಮಾನ ಸೇವಾ ಟಿಕೆಟ್‌ ಮಾರಾಟ ಆರಂಭ

Last Updated 16 ಫೆಬ್ರುವರಿ 2022, 17:54 IST
ಅಕ್ಷರ ಗಾತ್ರ

ಹೈದರಾಬಾದ್‌:ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಹಣ ಸಂಗ್ರಹಿಸಲುತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಒಂದು ಕೋಟಿ ರೂಪಾಯಿಯ ‘ಉದಯಾಸ್ತಮಾನ’ ಸೇವಾ ಟಿಕೆಟ್‌ಗಳ ಮಾರಾಟಕ್ಕೆ ಚಾಲನೆ ನೀಡಿದೆ.

ಅಭಿಷೇಕವನ್ನು ಒಳಗೊಂಡಂತೆ ಶುಕ್ರವಾರದ ಸೂಪರ್ ಸ್ಪೆಷಲ್ ದರ್ಶನಕ್ಕೆ ₹1.5 ಕೋಟಿ ದರವನ್ನು ಟಿಟಿಡಿ ನಿಗದಿಪಡಿಸಿದೆ.

ಸುಪ್ರಭಾತದಿಂದ ಆರಂಭವಾಗುವ ದಿನದ ಎಲ್ಲ ದೈವಿಕ ಆಚರಣೆಗಳನ್ನುವೀಕ್ಷಿಸಲು, ಭಕ್ತ ಮತ್ತು ಅವರ ಕುಟುಂಬದ ಐವರು ಸದಸ್ಯರಿಗೆ ಗರ್ಭಗುಡಿ ಮತ್ತು ಇತರ ನಿಗದಿತ ಪ್ರದೇಶಗಳಲ್ಲಿ ಕುಳಿತುಕೊಳ್ಳಲು ಈ ಟಿಕೆಟ್‌ ಅವಕಾಶ ನೀಡುತ್ತದೆ.

ಟಿಕೆಟ್ ಸಿಂಧುತ್ವದ ಅವಧಿ 25 ವರ್ಷಗಳು (ಪ್ರತಿ ವರ್ಷ ಒಂದು ನಿಗದಿತ ದಿನ) ಅಥವಾ ದಾನಿಗಳ ಜೀವಿತಾವಧಿಯಲ್ಲಿ ಯಾವುದು ಮೊದಲು ಬರುತ್ತದೆಯೇ ಅದು. ಕಂಪನಿ ಅಥವಾ ಸಂಸ್ಥೆಗಳಾಗಿದ್ದರೆ ಟಿಕೆಟ್‌ನ ಸಿಂಧುತ್ವದ ಅವಧಿ 20 ವರ್ಷಗಳಾಗಿರುತ್ತದೆ.

ಟಿಟಿಡಿ ಅಧಿಕೃತ ಪೋರ್ಟಲ್ https://tirupatibalaji.ap.gov.in ನಲ್ಲಿ ಬುಕ್ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT