ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಮಲ ಬಳಿಯ ಅಂಜನಾದ್ರಿಯೇ ಹನುಮನ ಜನ್ಮಸ್ಥಳ: ಟಿಟಿಡಿ

Last Updated 21 ಏಪ್ರಿಲ್ 2021, 13:22 IST
ಅಕ್ಷರ ಗಾತ್ರ

ತಿರುಪತಿ: ತಿರುಮಲ ಬಳಿಯ ಇರುವ ಅಂಜನಾದ್ರಿಯೇ ಆಂಜನೇಯ ದೇವರ ಜನ್ಮಸ್ಥಳ ಎಂದು ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಬುಧವಾರ ಘೋಷಿಸಿದೆ.

ತಿರುಮಲದ ಉತ್ತರ ದಿಕ್ಕಿನಲ್ಲಿ, 5 ಕಿ.ಮೀ. ದೂರದಲ್ಲಿ ಜಾಪಾಲಿ ತೀರ್ಥ ಇದೆ. ಪರ್ವತಗಳಿಂದ ಆವೃತ ಈ ಪ್ರದೇಶದಲ್ಲಿಯೇ ಅಂಜನಾದ್ರಿ ಇದ್ದು, ಇದೇ ಆಂಜನೇಯನ ಜನ್ಮಸ್ಥಳ ಎಂದು ತಿರುಪತಿಯ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿಯಾಗಿರುವ ಟಿಟಿಡಿ ಹೇಳಿದೆ.

ಈ ವಿಷಯ ಕುರಿತು ಅಧ್ಯಯನ ನಡೆಸಿ, ಅಭಿಪ್ರಾಯ ತಿಳಿಸುವಂತೆತಿರುಪತಿಯಲ್ಲಿರುವ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮುರಲೀಧರ ಶರ್ಮಾ ಅವರ ನೇತೃತ್ವದಲ್ಲಿ ವಿದ್ವಾಂಸರನ್ನು ಒಳಗೊಂಡ ಸಮಿತಿಯೊಂದನ್ನು ಟಿಟಿಡಿ ರಚಿಸಿತ್ತು.

ರಾಮ ನವಮಿ ದಿನವಾದ ಬುಧವಾರ, ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್‌ ಪುರೋಹಿತ್ ಅವರ ಸಮ್ಮುಖದಲ್ಲಿ ಸಮಿತಿಯು ಈ ಘೋಷಣೆ ಮಾಡಿದೆ. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್‌.ಜವಾಹರ್‌ ರೆಡ್ಡಿ, ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾರೆಡ್ಡಿ ಉಪಸ್ಥಿತರಿದ್ದರು.

'ಶ್ರೀ ಆಂಜನೇಯಸ್ವಾಮಿ ವಾರಿ ಜನ್ಮಸ್ಥಲಂ ತಿರುಮಲೋನಿ ಅಂಜನಾದ್ರಿ’ಎಂಬ ಶಿರೋನಾಮೆಯ, ತೆಲುಗು ಭಾಷೆಯಲ್ಲಿರುವ ಕಿರುಹೊತ್ತಗೆಯನ್ನು ಸಮಿತಿ ಸಿದ್ಧಪಡಿಸಿದ್ದು, ಅಂಜನಾದ್ರಿಯೇ ಆಂಜನೇಯ ದೇವರ ಜನ್ಮಸ್ಥಳ ಎಂದು ಈ ಪುಸ್ತಕದಲ್ಲಿ ಪ್ರತಿಪಾದಿಸಲಾಗಿದೆ.

‘ಪುರಾತನ ಸಾಹಿತ್ಯ, ಶಾಸನಗಳು, ಐತಿಹಾಸಿಕ ಸಂಗತಿಗಳು ಹಾಗೂ ಜ್ಯೋತಿರ್ವಿಜ್ಞಾನದ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗಿದೆ. ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿ, ಅವುಗಳ ಆಧಾರದ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ’ ಎಂದು ಪ್ರೊ.ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT