ಗುರುವಾರ , ಜೂನ್ 24, 2021
23 °C

ಕೋವಿಡ್‌: ಕೇರಳದ ಪತ್ರಕರ್ತ ವಿಪಿನ್‌ ಚಂದ್‌ ನಿಧನ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ‘ಮನೋರಮಾ ನ್ಯೂಸ್‌’ನ ಮುಖ್ಯ ವರದಿಗಾರರ ವಿಪಿನ್‌ ಚಂದ್‌ (42) ಅವರು ಕೋವಿಡ್‌ ಸಂಬಂಧಿತ ಸಮಸ್ಯೆಯಿಂದ ಭಾನುವಾರ ನಿಧನರಾದರು. 

‘ವಿಪಿನ್‌ ಚಂದ್‌ ಅವರು ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲೂ ಕೆಲಸದಲ್ಲಿ ಸಕ್ರಿಯರಾಗಿದ್ದರು. ಎರಡು ವಾರಗಳ ಹಿಂದೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರನ್ನು ಮನೆಯಲ್ಲೇ ‍ಪ್ರತ್ಯೇಕ ವಾಸದಲ್ಲಿ ಇರಿಸಲಾಗಿತ್ತು. ಆದರೆ ಬಳಿಕ ಅವರನ್ನು ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಯಿತು’ ಎಂದು ಕುಟುಂಬದವರು ತಿಳಿಸಿದರು.

‘ವಿಪಿನ್‌ ಪರಿಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ಕೊಚ್ಚಿಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಭಾನುವಾರ ನಸುಕಿನ 2 ಗಂಟೆಗೆ ಅವರು ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು’ ಎಂದು ಅವರು ಮಾಹಿತಿ ನೀಡಿದರು.

ಎರ್ನಾಕುಲಂದ ಅಲಂಗಡ್ ನಿವಾಸಿ ವಿಪಿನ್‌ ಚಂದ್‌ ಅವರು 2005ರಲ್ಲಿ  ಪತ್ರಿಕೋದ್ಯಮ ವೃತ್ತಿಯನ್ನು ಪ್ರಾರಂಭಿಸಿದ್ದರು. 2012ರಲ್ಲಿ ‘ಮಾತೃಭೂಮಿ ನ್ಯೂಸ್‌’ ಸೇರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು