ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಪಾಳದಲ್ಲಿ ಮುಂಬೈ ಮೂಲದ ಇಬ್ಬರು ಪರ್ವತಾರೋಹಿಗಳು ನಿಧನ

ನಾರಾಯಣನ್‌ ಅಯ್ಯರ್‌ ಮತ್ತು ಡಾ.ಪ್ರಜ್ಞಾ ಸಾವಂತ್‌ ಮೃತರು
Last Updated 8 ಮೇ 2022, 13:45 IST
ಅಕ್ಷರ ಗಾತ್ರ

ಮುಂಬೈ: ನೇಪಾಳದ ಪರ್ವತ ಶ್ರೇಣಿಗಳಲ್ಲಿ ಮುಂಬೈ ಮೂಲದ ಇಬ್ಬರು ಪರ್ವತಾರೋಹಿಗಳು ಮೃತಪಟ್ಟಪ್ರತ್ಯೇಕ ಘಟನೆಕಳೆದ ವಾರ ನಡೆದಿದೆ.

ಮೃತರನ್ನು ಮುಂಬೈನ ಘಟ್ಕೋಪರ್‌ ನಿವಾಸಿ ನಾರಾಯಣನ್‌ ಅಯ್ಯರ್‌ (52) ಮತ್ತು ಗುರುಗ್ರಾಮ ನಿವಾಸಿ ಡಾ.ಪ್ರಜ್ಞಾ ಸಾವಂತ್‌ (55) ಎಂದು ಗುರುತಿಸಲಾಗಿದೆ.

ಅಖಿಲ ಮಹಾರಾಷ್ಟ್ರ ಗಿರ್ಯಾರೋಹಣ ಮಹಾಸಂಘ (ಎಎಂಜಿಎಂ) ದುರ್ಘಟನೆಯನ್ನು ಖಚಿತಪಡಿಸಿ, ಈ ಸಾವು ತೀವ್ರ ನೋವು ಮತ್ತು ಆಘಾತ ಉಂಟುಮಾಡಿದೆ ಎಂದು ತಿಳಿಸಿದೆ.

ಡಾ.ಸಾವಂತ್‌ ಜಗತ್ತಿನ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟ್‌ ಬೇಸ್‌ ಕ್ಯಾಂಪ್‌ಗೆ ಚಾರಣ ಮಾಡುವ ವೇಳೆ ಆನಾರೋಗ್ಯಕ್ಕೆ ಒಳಗಾದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಇನ್ನೊಬ್ಬ ಚಾರಣಿಗ ಅಯ್ಯರ್‌ ಜಗತ್ತಿನ ಮೂರನೇ ಅತಿ ಎತ್ತರದ ಪರ್ವತ ಕಾಂಚೆನ್‌ಜುಂಗಾದ ತುತ್ತತುದಿಗೆ ಏರುವ ವೇಳೆ 8,200 ಮೀಟರ್‌ ಎತ್ತರದಲ್ಲಿ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT