ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಆರು ದಿನಗಳಲ್ಲಿ ನಾಲ್ಕು ಹುಲಿಗಳ ಸಾವು

Last Updated 4 ಏಪ್ರಿಲ್ 2022, 13:40 IST
ಅಕ್ಷರ ಗಾತ್ರ

ನರ್ಮದಾಪುರಂ: ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಸತ್ಪುರ ಮೀಸಲು ಅರಣ್ಯ ಪ್ರದೇಶದಲ್ಲಿ (ಎಸ್‌ಟಿಆರ್) ಮತ್ತೆರಡು ಹುಲಿಗಳ ಸಾವು ಸಂಭವಿಸಿದೆ. ಇದರೊಂದಿಗೆ ಕಳೆದ ಆರು ದಿನಗಳ ಅವಧಿಯಲ್ಲಿ ನಾಲ್ಕು ಹುಲಿಗಳ ಶವ ಪತ್ತೆಯಾಗಿವೆ.

ಪರಸ್ಪರ ಕಾದಾಟವೇ ಸಾವಿಗೆ ಕಾರಣವಾಗಿರಬಹುದು ಎಂದು ಅವಲೋಕಿಸಲಾಗಿದೆ.

ಏಪ್ರಿಲ್ 2 ಶನಿವಾರದಂದು ಪಚ್‌ಮಢಿ ವ್ಯಾಪ್ತಿಯ ಮೊಗ್ರಾ ಪ್ರದೇಶದಲ್ಲಿ ಸುಮಾರು 5-6 ತಿಂಗಳ ಹುಲಿ ಮರಿಯ ಶವ ದೊರಕಿದೆ. ಮರುದಿನ (ಏ.3) ಅರಣ್ಯ ತಂಡದ ಶೋಧನೆಯದಲ್ಲಿ 500 ಮೀಟರ್ ದೂರದಲ್ಲಿ ಸುಮಾರು ಎಂಟು ವರ್ಷದ ಹುಲಿಯನ್ನು ಗಾಯಗೊಂಡ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಆದರೆ ವೈದ್ಯಕೀಯ ನೆರವು ನೀಡಲು ಸಾಗಿಸುತ್ತಿದ್ದಾಗ ಮೃತಪಟ್ಟಿತ್ತು ಎಂದು ಎಸ್‌ಟಿಆರ್ ನಿರೀಕ್ಷಕ ಎಲ್. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಅಖಿಲ ಭಾರತ ಹುಲಿ ಅಂದಾಜು ಗಣತಿ ವರದಿ 2018 ಪ್ರಕಾರ ಮಧ್ಯಪ್ರದೇಶದಲ್ಲಿ ದೇಶದಲ್ಲೇ ಅತ್ಯಧಿಕ 526 ಹುಲಿಗಳು ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT