ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಸರ್ಕಾರಿ ವೈದ್ಯರಾಗಿ ಇಬ್ಬರು ಮಂಗಳಮುಖಿಯರ ನೇಮಕ

Last Updated 1 ಡಿಸೆಂಬರ್ 2022, 7:51 IST
ಅಕ್ಷರ ಗಾತ್ರ

ಹೈದರಾಬಾದ್: ಇದೇ ಮೊದಲ ಬಾರಿಗೆ ಮಂಗಳಮುಖಿಯರಿಬ್ಬರು ತೆಲಂಗಾಣದಲ್ಲಿ ಸರ್ಕಾರಿ ವೈದ್ಯರಾಗಿ ನೇಮಕವಾಗಿದ್ದಾರೆ.

ಎಂಬಿಬಿಎಸ್ ಪದವಿ ಮುಗಿಸಿರುವ ಪ್ರಾಚಿ ರಾತೋಡ್ ಹಾಗೂ ರುತ್ ಜಾನ್ ಪೌಲ್ ಅವರೇ ಈ ಸಾಧನೆ ಮಾಡಿದವರು. ಈ ಮೂಲಕ ಈ ಇಬ್ಬರು ಮಂಗಳಮುಖಿ ವೈದ್ಯರು ತೆಲಂಗಾಣದಲ್ಲಿ ಇತಿಹಾಸ ಬರೆದಂತಾಗಿದೆ.

2015 ರಲ್ಲಿ ಈ ಲೈಂಗಿಕ ಅಲ್ಪಸಂಖ್ಯಾತರು ಎಂಬಿಬಿಎಸ್ ಪದವಿ ಮುಗಿಸಿದ್ದರು. ನಂತರ ಕೆಲ ವರ್ಷ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಇವರ ಸೇವೆ ಪಡೆಯಲು ಅನೇಕ ಆಸ್ಪತ್ರೆಗಳು ಹಾಗೂ ರೋಗಿಗಳು ಮುಂದೆ ಬರುತ್ತಿರಲಿಲ್ಲ.

ಪ್ರಾಚಿ ರಾತೋಡ್ ಅವರ ಲಿಂಗ ವಿಚಾರವಾಗಿ ಅವರು ಸೇವೆ ಸಲ್ಲಿಸುತ್ತಿದ್ದ ಒಂದು ದೊಡ್ಡ ಖಾಸಗಿ ಆಸ್ಪತ್ರೆಯಿಂದ ಅವರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

ಈ ಇಬ್ಬರೂ ಮಂಗಳಮುಖಿಯರನ್ನು ತೆಲಂಗಾಣದ ಸರ್ಕಾರಿ ಆಸ್ಪತ್ರೆಯಾಗಿರುವ ಓಸ್ಮಾನಿಯಾ ಸಾರ್ವಜನಿಕ ಆಸ್ಪತ್ರೆಯ ಸೇವೆಗೆ ನಿಯೋಜಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT