ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮ: ಟಿಆರ್‌ಎಫ್‌ಗೆ ಸೇರಿದ ಇಬ್ಬರು ಉಗ್ರರ ಬಂಧನ

Last Updated 26 ಡಿಸೆಂಬರ್ 2020, 7:49 IST
ಅಕ್ಷರ ಗಾತ್ರ

ಜಮ್ಮು: 'ದಿ ರೆಸಿಸ್ಟೆನ್ಸ್ ಫೋರ್ಸ್' (ಟಿಆರ್‌ಎಫ್) ಸಂಘಟನೆಗೆ ಸೇರಿದ ಇಬ್ಬರು ಉಗ್ರರನ್ನು ಬಂಧಿಸಲಾಗಿದ್ದು, ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಲಷ್ಕರ್‌ ಎ ತಯಬಾ ಉಗ್ರ ಸಂಘಟನೆ ಟಿಆರ್‌ಎಫ್‌ ಎಂಬ ಹೆಸರಿನಲ್ಲಿಯೂ ಸಕ್ರಿಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಧಿತರನ್ನು ಚುರಾತ್‌ನ ರಯೀಸ್ ಅಹ್ಮದ್ ದಾರ್ ಮತ್ತು ಕುಲ್ಗಾಂನ ಅಶ್ಮುಜಿಯ ಸುಬ್ಜಾರ್ ಅಹ್ಮದ್ ಶೇಖ್ ಎಂದು ಗುರುತಿಸಲಾಗಿದೆ. ಈ ಉಗ್ರರು ಶುಕ್ರವಾರ ಸಂಜೆ ಕಾರಿನಲ್ಲಿ ಶ್ರೀನಗರದತ್ತ ಪ್ರಯಾಣಿಸುತ್ತಿದ್ದಾಗ ಅವರನ್ನು ನಾರ್ವಾಲ್ ಬೈಪಾಸ್‌ನ ಬಳಿ ವಿಶೇಷ ಕಾರ್ಯಾಚರಣೆ ಪಡೆ (ಎಸ್‌ಒಜಿ) ಪೊಲೀಸರು ಬಂಧಿಸಿದರು.

ಟಿಆರ್‌ಎಫ್‌ ಉಗ್ರರ ಚಲನವಲನ ಕುರಿತು ಮಾಹಿತಿ ಲಭಿಸುತ್ತಿದ್ದಂತೆಯೇ, ಎಸ್‌ಒಜಿಯು ನಾರ್ವಾಲ್ ಬೈಪಾಸ್‌ನ ಬಳಿ ವಿಶೇಷ ಚೆಕ್‌ಪಾಯಿಂಟ್‌ ಸ್ಥಾಪಿಸಿತ್ತು. ಚೆಕ್‌ಪಾಯಿಂಟ್‌ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಈ ಉಗ್ರರು ಪರಾರಿಯಾಗಲು ಯತ್ನಿಸಿದರು. ಆದರೆ ಉಗ್ರರ ಕಾರನ್ನು ಹಿಂಬಾಲಿಸಿದ ಪೊಲೀಸರು, ಅವರನ್ನು ಹಿಡಿಯುವಲ್ಲಿ ಸಫಲರಾದರು ಎಂದು ಅವರು ತಿಳಿಸಿದರು.

ಎಕೆ ಅಸಾಲ್ಟ್‌ ರೈಫಲ್‌, ಎರಡು ಮ್ಯಾಗಜಿನ್‌, 60 ಸುತ್ತು ಗುಂಡು, ಒಂದು ಪಿಸ್ತೂಲ್‌ ಮತ್ತು 15 ಸುತ್ತು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT