ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲ ಪ್ರದೇಶ: ಇಬ್ಬರು ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ ಸೇನೆ

Last Updated 2 ಏಪ್ರಿಲ್ 2022, 16:18 IST
ಅಕ್ಷರ ಗಾತ್ರ

ಇಟಾನಗರ/ದಿಬ್ರುಗಢ: ಅರುಣಾಚಲ ಪ್ರದೇಶದಲ್ಲಿ ಉಗ್ರರೆಂದು ತಪ್ಪಾಗಿ ಅರ್ಥೈಸಿ ಇಬ್ಬರು ಗ್ರಾಮಸ್ಥರ ಮೇಲೆ ಸೈನಿಕರು ಗುಂಡು ಹಾರಿಸಿದ ಘಟನೆ ನಡೆದಿದೆ ಎಂದು ಸೇನಾ ಮೂಲಗಳು ಶನಿವಾರ ತಿಳಿಸಿವೆ.

ಶುಕ್ರವಾರ ಸಂಜೆ ತಿರಾಪ್ ಜಿಲ್ಲೆಯ ಚಾಸಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಇಬ್ಬರು ನಾಗರಿಕರನ್ನು ನೋಫ್ಯಾ ವಾಂಗ್ಡನ್ (28) ಮತ್ತು ರಾಮ್ವಂಗ್ ವಾಂಗ್ಸು (23) ಎಂದು ಗುರುತಿಸಲಾಗಿದೆ. ಅವರು ಮೀನು ಹಿಡಿದು ಮನಗೆ ಹಿಂತಿರುಗುತ್ತಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿವೆ.

ಗಾಯಾಳುಗಳನ್ನು ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತುಆಸ್ಪತ್ರೆಗೆ (ಎಎಂಸಿಎಚ್) ದಾಖಲಿಸಲಾಗಿದೆ. ಇಬ್ಬರೂ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಉಗ್ರರ ಬಗ್ಗೆ ಖಚಿತ ಮಾಹಿತಿ ಬೆನ್ನಲ್ಲೇ ಸೇನೆ ಕಾರ್ಯಾಚರಣೆ ನಡೆಸಿತ್ತು ಎಂದು ವರದಿಯಾಗಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್ ಗ್ರಾಮಗಳಲ್ಲಿ ಭದ್ರತಾ ಪಡೆಗಳ ಗುಂಡಿಗೆ 14 ನಾಗರಿಕರು ಮೃತಪಟ್ಟಿದ್ದರು.

ಬಳಿಕ ನಾಗರಿಕರು ವ್ಯಾಪಕ ಪ್ರತಿಭಟನೆ ನಡೆಸಿದ್ದರಲ್ಲದೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ರದ್ದುಗೊಳಿಸುವಂತೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT