ಸೋಮವಾರ, ಅಕ್ಟೋಬರ್ 26, 2020
27 °C
ಈ ನೇಮಕದಿಂದ ನೌಕಾಪಡೆಯಲ್ಲಿ ಮಹಿಳೆಯರ ನಿಯುಕ್ತಿಗೆ ದಾರಿ

ಸಮರನೌಕೆಯಲ್ಲಿ ಮಹಿಳೆಯರ ಹೆಜ್ಜೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೊಚ್ಚಿ: ಇದೇ ಮೊದಲ ಬಾರಿಗೆ ಭಾರತೀಯ ನೌಕಾಪಡೆಯ ಯುದ್ಧನೌಕೆಗೆ ಮಹಿಳೆಯರು ಅಡಿಯಿಟ್ಟಿದ್ದಾರೆ.

ಹೆಲಿಕಾಪ್ಟರ್‌ ನಿರ್ವಹಣಾ ತಂತ್ರಜ್ಞರಾಗಿ ಇಬ್ಬರು ಮಹಿಳೆಯರು ನೇಮಕಗೊಂಡಿದ್ದಾರೆ. ಈ ಬೆಳವಣಿಗೆಯು ಮುಂಚೂಣಿ
ಸಮರನೌಕೆಗಳಲ್ಲಿ ಮಹಿಳೆಯರ ನಿಯುಕ್ತಿಗೆ ದಾರಿ ಮಾಡಿಕೊಟ್ಟಿದೆ. 

ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಮತ್ತು ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಅವರು ಈ ಶ್ರೇಯ ಪಡೆದ ಮೊದಲಿಗರಾಗಿದ್ದಾರೆ. ಈ ಮುನ್ನ ಮಹಿಳೆಯರನ್ನು ವಾಯುಪಡೆಯು ಆಯ್ದ ಕೆಲಸಗಳಿಗೆ ಮಾತ್ರ ನಿಯುಕ್ತಿ ಮಾಡಲಾಗುತ್ತಿತ್ತು.

ಐಎನ್‌ಎಸ್‌ ಗರುಡದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಪದವಿ ಪ್ರದಾನ ಮಾಡಲಾಯಿತು.

ನಾಲ್ವರು ಮಹಿಳೆಯರು, ಮೂವರು ಕಡಲ ರಕ್ಷಣಾ ಅಧಿಕಾರಿಗಳನ್ನು ಒಳಗೊಂಡ 17 ಮಂದಿ ನೌಕಾಧಿಕಾರಿಗಳ ತಂಡದಲ್ಲಿ ಇವರಿಬ್ಬರೂ ಕೆಲಸ ನಿರ್ವಹಿಸಲಿದ್ದಾರೆ. ಈ ಪೈಕಿ 13 ಅಧಿಕಾರಿಗಳು ದಿನಂಪ್ರತಿ ಕೆಲಸದಲ್ಲಿ ತೊಡಗಿದ್ದರೆ, ಉಳಿದ ನಾಲ್ವರು ಮಹಿಳೆಯರಿಗೆ ಅವಧಿ ನಿಗದಿಪಡಿಸಲಾಗಿದೆ. 

ಇದನ್ನೂ ಓದಿ...ರಫೇಲ್‌ ಸ್ಕ್ವಾಡ್ರನ್‌ಗೆ ಶೀಘ್ರದಲ್ಲೇ ಮಹಿಳಾ ಪೈಲಟ್‌

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಬ್ಬಂದಿ ಮುಖ್ಯಸ್ಥ ರಿಯರ್ ಅಡ್ಮಿರಲ್ ಆಂಟನಿ ಜಾರ್ಜ್ ಅವರು ಇತರ ಆರು ಅಧಿಕಾರಿಗಳಿಗೆ ಇನ್‌ಸ್ಟ್ರಕ್ಟರ್ ಬ್ಯಾಡ್ಜ್ ಪ್ರದಾನ ಮಾಡಿದರು.

‘ಸಮರನೌಕೆಯ ಹೆಲಿಕಾಪ್ಟರ್ ಕಾರ್ಯಾಚರಣೆಯಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಅವಕಾಶ ನೀಡಿರುವ ಮಹತ್ತರ ಸಂದರ್ಭ ಇದು. ನೌಕಾಪಡೆಯ ಮುಂಚೂಣಿ ಯುದ್ಧನೌಕೆಗಳಲ್ಲಿ ಮಹಿಳೆಯರನ್ನು ನಿಯೋಜಿಸಲು ಇದು ದಾರಿ ಮಾಡಿಕೊಡುತ್ತದೆ’ ಎಂದು ಜಾರ್ಜ್ ಹೇಳಿದರು. 

ವಾಯು ಪಥದರ್ಶಕ ವ್ಯವಸ್ಥೆ, ವೈಮಾನಿಕ ಹಾರಾಟ ಪ್ರಕ್ರಿಯೆ, ವೈಮಾನಿಕ ಯುದ್ಧದಲ್ಲಿ ಅಳವಡಿಸಿ ಕೊಳ್ಳಬಹುದಾದ ತಂತ್ರಗಳು, ಜಲಾಂತರ್ಗಾಮಿ ನಿಯಂತ್ರಣ ತಂತ್ರಗಾರಿಕೆ ಮೊದಲಾದ ತರಬೇತಿಗಳನ್ನು ತಂಡಕ್ಕೆ ನೀಡಲಾಗಿದೆ. ಈ ಅಧಿಕಾರಿಗಳು ನೌಕಾಪಡೆ ಮತ್ತು ಕಡಲ ರಕ್ಷಣಾ ಪಡೆಯ ಭಾಗವಾಗಿ ಕೆಲಸ ಮಾಡಲಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು