ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಲ್ಲಿ ಹಣದುಬ್ಬರ ಹೆಚ್ಚಳ: ಭಾರತೀಯರ ವಿದೇಶಿ ವ್ಯಾಸಂಗ ಕಠಿಣ

Last Updated 9 ಜನವರಿ 2023, 2:36 IST
ಅಕ್ಷರ ಗಾತ್ರ

ನವದೆಹಲಿ : ಬ್ರಿಟನ್‌ನ ವಿದ್ಯಾರ್ಥಿ ವೀಸಾ ಪಡೆದುಕೊಂಡಿರುವ ಭಾರತೀಯರಿಗೆ ಈಗ ಸಂಕಟ ಎದುರಾಗಿದೆ. ಆ ದೇಶದಲ್ಲಿ ಹಣದುಬ್ಬರ ಏರಿಕೆಯಾಗಿರುವುದರಿಂದ ವ್ಯಾಸಂಗಕ್ಕೆಂದು ಅಲ್ಲಿಗೆ ತೆರಳಿರುವವರು ತಮ್ಮ ಕಾಲೇಜು ಅಥವಾ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನೆಲೆ ಕಂಡುಕೊಳ್ಳಲು ಪರದಾಡುವಂತಾಗಿದೆ.

ಕೈಗೆಟಕುವ ದರದ ವಸತಿ ಸೌಕರ್ಯ ಹುಡುಕುವುದು ಸವಾಲೆನಿಸಿದೆ. ಆಹಾರ ವಸ್ತುಗಳ ಹಣದುಬ್ಬರವು ನಿರಂತರವಾಗಿ ಏರುತ್ತಿರುವುದರಿಂದ ಅವರ ದೈನಂದಿನ ಖರ್ಚುಗಳೂ ಹೆಚ್ಚುತ್ತಿದೆ. ಇದು ಅವರಿಗೆ ತಲೆನೋವಾಗಿ ಪರಿಣಮಿಸಿದೆ.

‘ಹೋದ ವರ್ಷದ ಅಕ್ಟೋಬರ್‌ 1 ರಿಂದ 21ರ ಅವಧಿಯಲ್ಲಿ ಸುಮಾರು ₹1 ಲಕ್ಷದಷ್ಟು ಹಣ ಖರ್ಚಾಗಿದೆ. ಹೀಗಾಗಿ ರಿಯಾಯಿತಿ ದರದ ವಸತಿಗಾಗಿ ಪ್ರತಿದಿನವೂ ಹುಡುಕಾಟ ನಡೆಸುತ್ತಿದ್ದೇನೆ. ವಾರಾಂತ್ಯದ ದಿನಗಳನ್ನೂ ಈ ಕೆಲಸಕ್ಕಾಗಿ ಮೀಸಲಿಟ್ಟಿದ್ದೇನೆ’ ಎಂದು ಲಂಡನ್‌ನ ಗೋಲ್ಡ್‌ಸ್ಮಿತ್ಸ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಚಾಯಾನಿಕಾ ದುಬೆ ಎಂಬುವರು ಹೇಳಿದ್ದಾರೆ.

2022ರ ಸೆಪ್ಟೆಂಬರ್‌ ಅಂತ್ಯಕ್ಕೆ ಭಾರತದ ಒಟ್ಟು 1.27 ‌ಲಕ್ಷ ಮಂದಿಗೆ ಬ್ರಿಟನ್‌ನ ವಿದ್ಯಾರ್ಥಿ ವೀಸಾ ಲಭಿಸಿದೆ.

‘ವಿದೇಶದಲ್ಲಿ ವ್ಯಾಸಂಗ: ಪದವಿ ಪಡೆಯುವುದಕ್ಕಷ್ಟೇ ಸೀಮಿತವಲ್ಲ’

ನವದೆಹಲಿ (‍ಪಿಟಿಐ): ‘ವಿದೇಶದ ಹಲವು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಭಾರತದಲ್ಲೇ ಕ್ಯಾಂಪಸ್‌ ತೆರೆಯಲು ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಅನುವು ಮಾಡಿಕೊಟ್ಟಿದೆ. ಹೀಗಿದ್ದರೂ ಭಾರತದ ಅನೇಕರು ವಿವಿಧ ದೇಶಗಳಿಗೆ ತೆರಳಿ ವ್ಯಾಸಂಗ ಮಾಡುವುದಕ್ಕೆ ಹಂಬಲಿಸುತ್ತಾರೆ. ಅವರ ಈ ನಿರ್ಧಾರದ ಹಿಂದಿನ ಉದ್ದೇಶವು ಪದವಿ ಪಡೆಯುದಷ್ಟೇ ಆಗಿರುವುದಿಲ್ಲ’ ವಿಷಯ ತಜ್ಞರು ಹಾಗೂ ವಿದ್ಯಾರ್ಥಿಗಳು ಹೇಳಿದ್ದಾರೆ.

‘ವಿದೇಶಗಳಲ್ಲಿ ವ್ಯಾಸಂಗ ಮಾಡಿದರೆ ಅಲ್ಲೇ ಉದ್ಯೋಗ ಗಿಟ್ಟಿಸಿಕೊಳ್ಳಬಹುದು. ಆ ಮೂಲಕ ಬದುಕನ್ನೂ ಕಟ್ಟಿಕೊಳ್ಳಬಹುದು. ಈ ಕಾರಣಕ್ಕಾಗಿಯೇ ಹಲವರು ವಿದೇಶ ವ್ಯಾಸಂಗಕ್ಕೆ ಒತ್ತು ನೀಡುತ್ತಾರೆ’ ಎಂದು ಪದವಿ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಿರುವ ರಿಪುಣ್‌ ದಾಸ್‌ ಎಂಬುವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT