ಸೋಮವಾರ, ಜೂನ್ 21, 2021
27 °C

ಜೈಸಲ್ಮೇರ್‌: ಗುಜರಿಯಲ್ಲಿದ್ದ ಗುಂಡು ಸಿಡಿದು ವ್ಯಕ್ತಿ ಸಾವು

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಜೈಸಲ್ಮೇರ್‌: ಇಲ್ಲಿನ ಪೋಖರಣ್‌ನಲ್ಲಿರುವ ಫೈರಿಂಗ್‌ ರೇಂಜ್‌ ಪ್ರದೇಶದಲ್ಲಿರುವ ಗುಜರಿಯಲ್ಲಿದ್ದ ಗುಂಡು ಸಿಡಿದ ಪರಿಣಾಮ 23 ವರ್ಷದ ವ್ಯಕ್ತಿ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ.

ಗಂಗಾನಗರ ಜಿಲ್ಲೆಯ ರಾಯ್‌ಸಿಂಗ್ ನಗರದ ನಿವಾಸಿ ರವೀಂದ್ರ ಮೃತ ದುರ್ದೈವಿ.

ಫೈರಿಂಗ್‌ ಪ್ರದೇಶದಲ್ಲಿ ಹಾಕಲಾಗಿದ್ದ ಗುಜರಿಯನ್ನು ಸಂಗ್ರಹಿಸುತ್ತಿದ್ದ ಸಮಯದಲ್ಲಿ ಗುಂಡು ಸಿಡಿದಿದೆ.

ಇತರ ವಸ್ತುಗಳಿಂದ ಲೋಹಗಳನ್ನು ಪ್ರತ್ಯೇಕಿಸುತ್ತಿದ್ದ ವೇಳೆ ಈ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು