ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧ ಸರ್ಜಿಕಲ್‌ ದಾಳಿ ನಡೆಸಿ, ಕಾಂಗ್ರೆಸ್‌ ವಿರುದ್ಧ ಅಲ್ಲ –ಸಿಬಲ್‌

Last Updated 27 ಆಗಸ್ಟ್ 2020, 12:48 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ಪ್ರಭಾವಿ ಕಾಂಗ್ರೆಸ್‌ಜಿತಿನ್‌ ಪ್ರಸಾದ್‌ ಅವರನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್‌ ಹೋರಾಟಕ್ಕೆ ಇಳಿದಿರುವುದು ಸರಿಯಲ್ಲ ಎಂದು ಕಾಂಗ್ರೆಸ್‌ ನಾಯಕ ಕಪಿಲ್‌ ಸಿಬಲ್‌ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಪಿಲ್‌ ಸಿಬಲ್‌ ಕಾಂಗ್ರೆಸ್‌ ಪಕ್ಷ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಸರ್ಜಿಕಲ್‌ ದಾಳಿ ನಡೆಸುವ ಬದಲು ಕಾಂಗ್ರೆಸ್‌ ಅನ್ನುಗುರಿಯಾಗಿಸಿಕೊಂಡಿರುವುದು ದುರದುಷ್ಟಕರ. ಆ ಮೂಲಕ ತನ್ನ ಶಕ್ತಿಯನ್ನು ವ್ಯಯಮಾಡಿಕೊಳ್ಳುತ್ತಿದೆಎಂದು ಟ್ವೀಟ್‌ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಜಿತಿನ್‌ ಪ್ರಸಾದ್‌ ಅವರನ್ನುಗುರಿಯಾಗಿಸಿಕೊಂಡು ಹೋರಾಟಕ್ಕೆ ಇಳಿದಿರುವುದು ಹಾಗೂ ಶಿಸ್ತು ಕ್ರಮಕ್ಕೆ ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ,ಅಧ್ಯಕ್ಷರ ಬದಲಾವಣೆಗಾಗಿ ಪತ್ರ ಬರೆದಿರುವುದಕ್ಕೆ ಈ ಶಿಕ್ಷೆಯೇ ಎಂದು ಕಪಿಲ್‌ ಸಿಬಲ್‌ ಸೇರಿದಂತೆ ಕೆಲ ಕಾಂಗ್ರೆಸ್‌ ಮುಖಂಡರು ಪ್ರಶ್ನೆ ಮಾಡಿದ್ದಾರೆ.

ಸಕ್ರಿಯ ಅಧ್ಯಕ್ಷರು ಬೇಕು ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 23 ಜನ ಪತ್ರ ಬರೆದವರಲ್ಲಿ ಜಿತಿನ್‌ ಪ್ರಸಾದ್‌ ಕೂಡ ಒಬ್ಬರಾಗಿದ್ದಾರೆ.

ಉತ್ತರ ಪ್ರದೇಶ ಕಾಂಗ್ರೆಸ್‌ನಲ್ಲಿ ಜಿತಿನ್‌ ಹಿಡಿತ ಹೊಂದಿದ್ದು, ಬ್ರಾಹ್ಮಣ ಸಮುದಾಯದ ವೋಟ್‌ ಬ್ಯಾಂಕ್‌ ಇವರಬೆನ್ನಿಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT