ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್‌ನಿಂದ 50 ವರ್ಷ ಮೇಲ್ಪಟ್ಟವರಿಗೂ ಕೋವಿಡ್–19 ಲಸಿಕೆ: ಹರ್ಷವರ್ಧನ್

Last Updated 15 ಫೆಬ್ರುವರಿ 2021, 16:24 IST
ಅಕ್ಷರ ಗಾತ್ರ

ನವದೆಹಲಿ: ಮಾರ್ಚ್‌ನಿಂದ 50 ವರ್ಷ ಮೇಲ್ಪಟ್ಟವರಿಗೂ ಕೋವಿಡ್–19 ಲಸಿಕೆ ನೀಡುವ ಸ್ಥಿತಿಯಲ್ಲಿ ನಾವಿರಲಿದ್ದೇವೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಮುಂದಿನ ಕೆಲವು ತಿಂಗಳುಗಳಲ್ಲಿ ಇನ್ನೂ 18ರಷ್ಟು ಕೋವಿಡ್–19 ಲಸಿಕೆಗಳು ದೇಶದಲ್ಲಿ ಬಳಕೆಗೆ ಲಭ್ಯವಾಗಲಿವೆ ಎಂದು ಅವರು ಸುಳಿವು ನೀಡಿದ್ದಾರೆ.

20–25 ದೇಶಗಳಿಗೆ ಭಾರತವು ಕೋವಿಡ್‌ ಲಸಿಕೆ ಕಳುಹಿಸಿಕೊಟ್ಟಿದೆ ಎಂದೂ ಅವರು ತಿಳಿಸಿದ್ದಾರೆ.

‘ಈವರೆಗೆ ದೇಶದಾದ್ಯಂತ ಶೇ 80ರಿಂದ 85ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಸುಮಾರು 18ರಿಂದ 20 ಲಸಿಕೆಗಳು ಪ್ರಿಕ್ಲಿನಿಕಲ್, ಕ್ಲಿನಿಕಲ್ ಹಾಗೂ ಕ್ಲಿನಿಕಲ್‌ನ ನಂತರದ ಹಂತಗಳಲ್ಲಿವೆ. ಮುಂಬರುವ ತಿಂಗಳುಗಳಲ್ಲಿ ಅವುಗಳು ಬಳಕೆಗೆ ದೊರೆಯುವ ನಿರೀಕ್ಷೆ ಇಟ್ಟುಕೊಳ್ಳಬಹುದು’ ಎಂದು ಅವರು ಹೇಳಿದ್ದಾರೆ.

‘ಕೋವಿಡ್‌ ಸಾಂಕ್ರಾಮಿಕ ಹರಡುವಿಕೆ ತಡೆಗೆ ಜನರು ಲಸಿಕೆ ಜತೆ ಇತರ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದೂ ಅಗತ್ಯ. ಕಳೆದ 7 ದಿನಗಳಲ್ಲಿ ದೇಶದ 188 ಜಿಲ್ಲೆಗಳಲ್ಲಿ ಒಂದೂ ಹೊಸ ಕೋವಿಡ್ ಪ‍್ರಕರಣ ವರದಿಯಾಗಿಲ್ಲ’ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT