ಕಾನ್ಪುರ್: ವ್ಯಕ್ತಿಯೊಬ್ಬರು ತಮ್ಮ ಜಮೀನು ಕಬಳಿಸಿದ್ದಾರೆ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಬಂದ ಮಹಿಳೆಯೊಬ್ಬರಲ್ಲಿ 'ನಿಮ್ಮ ರವಿಕೆ ಹರಿದುಕೊಂಡು ಬನ್ನಿ, ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆ' ಎಂದು ಹೇಳಿದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಉತ್ತರ ಪ್ರದೇಶದ ಕಾನ್ಪುರ್ ನಗರದಿಂದ ಸುಮಾರು 90 ಕಿ.ಮೀ ದೂರದಲ್ಲಿರುವ ನರವಲ್ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಿದ್ದ ರಾಮ್ ಆತುರ್ ಅಮಾನತುಗೊಂಡಿರುವ ಪೊಲೀಸ್ ಠಾಣಾಧಿಕಾರಿ. ರಾಮ್ ಆತುರ್ ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂಬ ಆರೋಪವೂ ಇದೆ. ಪ್ರಸ್ತುತ ಘಟನೆ ಬಗ್ಗೆ ತನಿಖೆ ನಡೆದು ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮಹಿಳೆಯಲ್ಲಿ ರವಿಕೆ ಹರಿದುಕೊಂಡು ಬನ್ನಿ ಎಂದು ಎಸ್‌ಎಚ್‌ಒ ಹೇಳಿರುವ ವಿಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ.
'ಅಗ್‌ಲೀ ಬಾರ್ ಬ್ಲೌಸ್ ಫಾಡ್ ಕೇ ಆನಾ...ಮೇ ದುಷ್ಕರ್ಮ್ ಕಾ ಕೇಸ್ ದರ್ಜ್ ಕರೂಂಗಾ' (ಮುಂದಿನ ಬಾರಿ ರವಿಕೆ ಹರಿದುಕೊಂಡು ಬನ್ನಿ, ನಾನು ಅತ್ಯಾಚಾರ ಪ್ರಕರಣ ದಾಖಲಿಸುವೆ) ಎಂದು ಪೊಲೀಸ್ ಹೇಳುತ್ತಿರುವುದು ವಿಡಿಯೊದಲ್ಲಿದೆ.
ಈ ರೀತಿಯ ವರ್ತನೆ ಸಹಿಸುವುದಿಲ್ಲ.ತನಿಖೆಗೆ ಆದೇಶ ನೀಡಲಾಗಿದೆ, ಪೊಲೀಸ್ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಕಾನ್ಪುರದ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.