ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಲಾಯಂ ಸಂಬಂಧಿ ಪ್ರಮೋದ್, ’ಕೈ‘ ಪೋಸ್ಟರ್ ಗರ್ಲ್ ಪ್ರಿಯಾಂಕಾ ಬಿಜೆಪಿ ಸೇರ್ಪಡೆ

Last Updated 20 ಜನವರಿ 2022, 10:15 IST
ಅಕ್ಷರ ಗಾತ್ರ

ಲಖನೌ: ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳುಬಾಕಿ ಉಳಿದಿರುವಾಗ ಉತ್ತರ ಪ್ರದೇಶದಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಸೋದರ ಸಂಬಂಧಿ ಮತ್ತು ಸಮಾಜವಾದಿ ಪಕ್ಷದ ಮಾಜಿ ಶಾಸಕ ಪ್ರಮೋದ್ ಗುಪ್ತಾ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಮೌರ್ಯ ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು.

ಪ್ರಿಯಾಂಕಾ ಮೌರ್ಯ ಅವರು ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ನೇತೃತ್ವದ ಕಾಂಗ್ರೆಸ್‌ನ 'ಲಡ್ಕಿ ಹೂಂ, ಲಡ್‌ ಸಕ್ತಿ ಹೂಂ' (ನಾನು ಹುಡುಗಿ ಹಾಗೂ ನಾನು ಹೋರಾಡ ಬಲ್ಲೆ)' ಅಭಿಯಾನದ ರೂವಾರಿಯಾಗಿದ್ದರು.

ಕಾಂಗ್ರೆಸ್‌ನ 'ಲಡ್ಕಿ ಹೂಂ, ಲಡ್‌ ಸಕ್ತಿ ಹೂಂ' ಎಂಬುದು ಕೇವಲ ಘೋಷಣೆಯಾಗಿದೆ. ಏಕೆಂದರೆ ‘ಲಡ್ಕಿ’ (ಮಹಿಳೆ) ಆಗಿರುವ ನನಗೆ ಲಂಚ ನೀಡಲು ಸಾಧ್ಯವಾಗದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ ಎಂದು ಪ್ರಿಯಾಂಕಾ ದೂರಿದ್ದಾರೆ.

ತನಗೆ ಟಿಕೆಟ್‌ ಕೊಡುವ ಬದಲು ತಿಂಗಳ ಹಿಂದೆಯಷ್ಟೇ ಪಕ್ಷ ಸೇರಿದ ವ್ಯಕ್ತಿಗೆ ಟಿಕೆಟ್‌ ನೀಡಲಾಗಿದೆ ಎಂದು ಕಿಡಿಕಾರಿದರು. ‘ನಾನು ಟಿಕೆಟ್ ಪಡೆಯಲು ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿದ್ದೆ. ಆದರೆ, ಟಿಕೆಟ್ ಅನ್ನು ಯಾರಿಗೆ ಕೊಡಬೇಕೆಂಬುದು ಮೊದಲೇ ನಿರ್ಧಾರವಾಗಿತ್ತು. ವಲ ಒಂದು ತಿಂಗಳ ಹಿಂದೆ ಪಕ್ಷ ಸೇರಿದ ವ್ಯಕ್ತಿಗೆ ನೀಡಲಾಯಿತು’ಎಂದಿದ್ದಾರೆ.

ಬುಧವಾರ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರುವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಫೆಬ್ರುವರಿ 10, 14, 20, 23, 27 ಮತ್ತು ಮಾರ್ಚ್ 3 ಮತ್ತು 7 ರಂದು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT