ಗುರುವಾರ , ಜನವರಿ 20, 2022
15 °C

DNP- 'ಬಿಕಿನಿ ಗರ್ಲ್‌'ಗೆ ಟಿಕೆಟ್ ನೀಡಿ ಕಿಡಿ ಹೊತ್ತಿಸಿದ ಕಾಂಗ್ರೆಸ್!

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಭರಾಟೆ ಜೋರಾಗಿ ನಡೆದಿದ್ದು, ಆಡಳಿತಾರೂಢ ಬಿಜೆಪಿ, ಅಖಿಲೇಶ್ ಅವರ ಎಸ್‌ಪಿ, ಮಾಯಾವತಿ ಅವರ ಬಿಎಸ್‌ಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದೆ.

ಈ ನಡುವೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ 125 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಲ್ಲಿ ಮಿರತ್ ಜಿಲ್ಲೆಯ ಹಸ್ತಿನಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಭಾರೀ ಗಮನ ಸೆಳೆದಿರುವುದಲ್ಲದೇ ವಿವಾದವನ್ನೂ ಹುಟ್ಟಿಹಾಕಿದೆ.

ಹೌದು, ಹಸ್ತಿನಾಪುರಕ್ಕೆ ಬಿಕಿನ್ ಗರ್ಲ್ ಎಂದು ಖ್ಯಾತರಾಗಿರುವ ನಟಿ, ರೂಪದರ್ಶಿ ಅರ್ಚನಾ ಗೌತಮ್ ಅವರಿಗೆ ಟಿಕೆಟ್ ನೀಡಿದೆ. ಇದೀಗ ಅವರ ಬಿಕಿನಿ ಫೋಟೊಗಳು ಎಲ್ಲೆಡೆ ವೈರಲ್ ಆಗುತ್ತಿದ್ದು, ಸಾಕಷ್ಟು ಹವಾ ಸೃಷ್ಟಿಸಿದ್ದಾರೆ.

ಮಿರತ್ ಮೂಲದ 27 ವರ್ಷದ ಈ ಚೆಲುವೆ ಅರ್ಚನಾ ಕಳೆದೊಂದು ವರ್ಷದಿಂದ ಮಾಡೆಲಿಂಗ್ ಜೊತೆ ಜೊತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದು, ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ.

ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿ 50 ಮಹಿಳೆಯರಿಗೆ ಟಿಕೆಟ್ ನೀಡಲಾಗಿದ್ದು, ಅದರಲ್ಲಿ ಅರ್ಚನಾ ಗೌತಮ್ ಅವರೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಆದರೆ, ಈ ಬಗ್ಗೆ ಕಿಡಿ ಕಾರಿರುವ ಅವರು, ‘ರಾಜಕೀಯ ನನ್ನ ನೆಚ್ಚಿನ ಕ್ಷೇತ್ರ. ಮಾಡೆಲಿಂಗ್ ನನ್ನ ಹವ್ಯಾಸ. ರಾಜಕೀಯಕ್ಕೂ ಅದಕ್ಕೂ ತಳಕು ಹಾಕಿ ಮೋಜು ನೋಡುವುದು ಸರಿಯಲ್ಲ. ಅದು ಕೆಲವರ ಕೆಟ್ಟ ಮನಸ್ಥಿತಿ’ ಎಂದು ಕಿಡಿ ಕಾರಿದ್ದಾರೆ.

ಇನ್ನು ಕಾಂಗ್ರೆಸ್‌ಗೆ ಟಿಕೆಟ್ ನೀಡಲು ಯಾರೂ ಸಿಗದಿದ್ದಕ್ಕೆ ಬಿಕಿನಿ ಗರ್ಲ್ ಕರೆದುಕೊಂಡು ಬಂದು ಗಿಮಿಕ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಇನ್ನು ಕೆಲ ಹಿಂದುಪರ ಸಂಘಟನೆಗಳು ಪುರಾಣ ಪ್ರಸಿದ್ದ ಹಸ್ತಿನಾಪುರಕ್ಕೆ ಬಿಕಿನ್ ಗರ್ಲ್ ಕಳಿಸಿ ಹಿಂದುತ್ವಕ್ಕೆ ಕಾಂಗ್ರೆಸ್ ಅವಮಾನ ಮಾಡಿದೆ ಎಂದು ಆರೋಪಿಸಿವೆ.

ಅರ್ಚನಾ ಗೌತಮ್ ಅವರು ಬಾಲಿವುಡ್‌ನ ಗ್ರೇಟ್ ಗ್ರ್ಯಾಂಡ್ ಮಸ್ತಿ ಸಿನಿಮಾದಲ್ಲಿ ನಟಿಸಿದ್ದರು. ಅಲ್ಲದೇ ಅವರು ಮಿಸ್ ಬಿಕಿನಿ ಇಂಡಿಯಾ 2018 ಸೌಂದರ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು