ಗುರುವಾರ , ಜೂನ್ 30, 2022
21 °C

ಉತ್ತರ ಪ್ರದೇಶ: ಉದ್ಯಮಿಯಿಂದ ₹1ಕೋಟಿ ಸುಲಿಗೆಗೆ ಯತ್ನ, ವ್ಯಕ್ತಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಂಭಾಲ್: ‘ಉದ್ಯಮಿವೊಬ್ಬರಿಂದ ₹1 ಕೋಟಿ ಸುಲಿಗೆ ಮಾಡಲು ಯತ್ನಿಸಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ಗುರುವಾರ ತಿಳಿಸಿದರು.

ಚಾಂದೌಸಿ ಪ್ರದೇಶದ ನಿವಾಸಿ ಶಾರದ ಕುಮಾರ್ ಎಂಬವರು ಈ ಸಂಬಂಧ ದೂರು ನೀಡಿದ್ದರು.

‘ಯಾರೋ ತನ್ನ ಮನೆಯೊಳಗೆ ಪತ್ರ ಎಸೆದು ಹೋಗಿದ್ದರು. ಆ ಪತ್ರದಲ್ಲಿ ₹1 ಕೋಟಿ ನೀಡುವಂತೆ ಹೇಳಲಾಗಿತ್ತು’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. 

‘ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದ್ದು, ಈತ ಶಾರದ ಕುಮಾರ್‌ ಅವರ ಪಕ್ಕದ ಮನೆಯ ನಿವಾಸಿಯಾಗಿದ್ದಾನೆ. ಅಲ್ಲದೆ ಈತನ ಮಾನಸಿಕ ಪರಿಸ್ಥಿತಿಯೂ ಸ್ಥಿರವಿಲ್ಲ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಚಕ್ರೇಶ್‌ ಮಿಶ್ರಾ ಅವರು ಹೇಳಿದ್ದಾರೆ.

‘ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದೆ. ತನಿಖೆಯನ್ನು ಆರಂಭಿಸಿದ್ದೇವೆ’ ಎಂದು ಎಸ್‌ಎಚ್‌ಓ ಚಂದೌಸಿ ದೇವೇಂದ್ರ ಶರ್ಮಾ ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು