ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC: ಅರ್ಜಿಯಲ್ಲಿ ಒಮ್ಮೆ ಮೂಲ ಮಾಹಿತಿ ಭರ್ತಿ ಮಾಡಿದರೆ ಸಾಕು - ಆಯೋಗ

‘ಒಂದು ಬಾರಿ ನೋಂದಣಿ’ ಪದ್ಧತಿ ಆರಂಭಿಸಿದ ಆಯೋಗ
Last Updated 25 ಆಗಸ್ಟ್ 2022, 10:22 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಸರ್ಕಾರಿ ಉದ್ಯೋಗದ ಆಕಾಂಕ್ಷಿಗಳ ಅನುಕೂಲಕ್ಕಾಗಿ ‘ಒಂದು ಬಾರಿ ನೋಂದಣಿ’ (ಒಟಿಆರ್‌) ಪದ್ಧತಿ ಆರಂಭಿಸಿದೆ. ಅಭ್ಯರ್ಥಿಗಳು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಪ್ರತಿಬಾರಿಯೂ ತಮ್ಮ ಮೂಲ ಮಾಹಿತಿ ಭರ್ತಿ ಮಾಡುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿದೆ.

ಮುಂದಿನ ದಿನಗಳಲ್ಲಿಯು‍‍ಪಿಎಸ್‌ಸಿ ನಡೆಸಲಿರುವ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬಯಸುವವರು ‘ಒಟಿಆರ್‌’ ಪದ್ಧತಿಯಡಿಯೇ ತಮ್ಮ ಮೂಲ ಮಾಹಿತಿ ದಾಖಲು ಮಾಡಬೇಕು. ಹೀಗೆ ದಾಖಲಿಸಿದ ಮಾಹಿತಿಯನ್ನು ಆಯೋಗದ ಸರ್ವರ್‌ನಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿಡಲಾಗುತ್ತದೆ.

‘ಆಯೋಗ ನಡೆಸುವ ಪರೀಕ್ಷೆಗಳಿಗೆ ಭಾರಿ ಪ್ರಮಾಣದಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತವೆ. ಒಟಿಆರ್‌ ಪದ್ಧತಿಯು ಅಭ್ಯರ್ಥಿಗಳ ಸಮಯ ಉಳಿತಾಯಕ್ಕೆ ಸಹಕಾರಿಯಾಗಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲೂ ನೆರವಾಗಲಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಅಭ್ಯರ್ಥಿಯು ಯಾವುದಾದರೂ ಒಂದು ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮುಂದಾದಾಗ ಆತ ಅಥವಾ ಆಕೆಯ ಮೂಲ ಮಾಹಿತಿಯು ತನ್ನಂತಾನೆ ಅರ್ಜಿಯಲ್ಲಿ ನಮೂದಾಗುತ್ತದೆ. ಒಮ್ಮೊಮ್ಮೆ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವಾಗ ಕಣ್ತಪ್ಪಿನಿಂದಾಗಿ ತಪ್ಪು ಮಾಹಿತಿಯನ್ನು ಅದರಲ್ಲಿ ನಮೂದಿಸಿಬಿಡುವ ಸಾಧ್ಯತೆ ಇರುತ್ತದೆ. ಒಟಿಆರ್‌ನಿಂದ ಇಂತಹ ಪ್ರಮಾದಗಳಿಗೆ ಕಡಿವಾಣ ಹಾಕಬಹುದು’ ಎಂದು ಆಯೋಗ ಹೇಳಿದೆ.

‘ಆಯೋಗದ ವೆಬ್‌ಸೈಟ್‌ಗಳಾದupsc.gov.in and upsconline.nic.in ತೆರೆದ ಕೂಡಲೇ ಒಟಿಆರ್‌ನ ಲಿಂಕ್‌ ಕಾಣಿಸಿಕೊಳ್ಳುತ್ತದೆ. ಅದನ್ನು ಕ್ಲಿಕ್ಕಿಸಿ ಅಭ್ಯರ್ಥಿಗಳು ತಮ್ಮ ಮಾಹಿತಿ ದಾಖಲಿಸಬಹುದು. ಒಟಿಆರ್‌ ಮೂಲಕ ಭರ್ತಿ ಮಾಡಿರುವ ಶೇ 70ರಷ್ಟು ಮಾಹಿತಿಯು ಆನ್‌ಲೈನ್‌ ಅರ್ಜಿಯಲ್ಲಿ ನಮೂದಾಗಿರುತ್ತದೆ’ ಎಂದು ತಿಳಿಸಿದೆ.

‘ಅಭ್ಯರ್ಥಿಗಳು ಒಟಿಆರ್‌ನಲ್ಲಿ ಬಹಳ ಎಚ್ಚರಿಕೆಯಿಂದ ಮಾಹಿತಿ ತುಂಬಬೇಕು. ಅಲ್ಲಿನ ಸೂಚನೆಗಳನ್ನು ಸರಿಯಾಗಿ ಓದಿಕೊಂಡು ಮಾಹಿತಿ ಭರ್ತಿ ಮಾಡಬೇಕು. ಆ ಮೂಲಕ ಮುಂದೆ ಯಾವುದೇ ಬಗೆಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT