ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಗತಕಾರಿಣಿ ಅಂಕಿತಾ ಕೊಲೆ ಪ್ರಕರಣ; ಪ್ರತಿಭಟನಕಾರರಿಂದ ಹೆದ್ದಾರಿ ಬಂದ್‌

Last Updated 25 ಸೆಪ್ಟೆಂಬರ್ 2022, 11:36 IST
ಅಕ್ಷರ ಗಾತ್ರ

ಡೆಹ್ರಾಡೂನ್‌ (ಪಿಟಿಐ): ಋಷಿಕೇಶದ ಬಳಿ 19 ವರ್ಷ ವಯಸ್ಸಿನ ಸ್ವಾಗತಕಾರಿಣಿಯನ್ನು ಹತ್ಯೆಗೈದ ಪ್ರಕರಣವನ್ನು ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ ಕಾರಣ ಉತ್ತರಾಖಂಡದ ಶ್ರೀನಗದರ ಬಳಿ ಋಷಿಕೇಶ–ಬದ್ರಿನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವು ಗಂಟೆಗಳ ಕಾಲ ಸಂಚಾರ ಸ್ಥಗಿತವಾಗಿತ್ತು.

ಪ್ರತಿಭಟನಕಾರರು ಹೆದ್ದಾರಿ ಮೇಲೆ ಕುಳಿತು ಧರಣಿ ನಡೆಸಿದರು.ಅವರ ಜೊತೆ ಮಾತನಾಡಲು ಮೃತ ಯುವತಿ ಅಂಕಿತಾ ಬಂಡಾರಿ ಅವರ ತಂದೆ ವಿರೇಂದ್ರ ಸಿಂಗ್‌ ಬಂಡಾರಿ ಅವರನ್ನು ಪೊಲೀಸರು ಸ್ಥಳಕ್ಕೆ ಕರೆದುಕೊಂಡುಬಂದರು. ಆದರೂ ಪ್ರತಿಭಟನಕಾರರು ಸ್ಥಳದಿಂದ ಹೊರಡಲು ನಿರಾಕರಿಸಿದರು. ಅಂಕಿತಾ ಸಾವಿಗೆ ಕಾರಣರಾದವರನ್ನು ಕೂಡಲೇ ಗಲ್ಲಿಗೇರಿಸುವಂತೆ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT