ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶವನ್ನು ಮಾಫಿಯಾ ಮುಕ್ತಗೊಳಿಸಿದ ಯೋಗಿ ಸರ್ಕಾರ: ಪ್ರಧಾನಿ ಮೋದಿ

Last Updated 31 ಜನವರಿ 2022, 10:31 IST
ಅಕ್ಷರ ಗಾತ್ರ

ನವದೆಹಲಿ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರವು ಉತ್ತರ ಪ್ರದೇಶವನ್ನು ಕಳೆದ ಐದು ವರ್ಷಗಳಲ್ಲಿ, ಅಪಹರಣ, ಸುಲಿಗೆ, ಗಲಭೆ, ದರೋಡೆ, ಮಾಫಿಯಾಮುಕ್ತಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ ನಡೆದ ವರ್ಚುವಲ್‌ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, '5 ವರ್ಷಗಳ ಹಿಂದೆಉತ್ತರ ಪ್ರದೇಶದ ಬಗ್ಗೆ ನಡೆಯುತ್ತಿದ್ದ ಚರ್ಚೆಗಳನ್ನು ಮರೆಯಲು ಯಾರೊಬ್ಬರಿಗೂ ಸಾಧ್ಯವಿಲ್ಲ. 5 ವರ್ಷಗಳ ಹಿಂದೆ ಗಲಭೆಕೋರರದ್ದೇ ಕಾನೂನಾಗಿತ್ತು. ದರೋಡೆಗಳು ವ್ಯಾಪಕವಾಗಿ ನಡೆಯುತ್ತಿದ್ದವು.ಹೆಣ್ಣು ಮಕ್ಕಳು ಮನೆಗಳಿಂದ ಹೊರಬರಲು ಹೆದರುತ್ತಿದ್ದರು. ಸರ್ಕಾರದ ರಕ್ಷಣೆಯಲ್ಲಿಯೇ ʼಮಾಫಿಯಾʼ ಮುಕ್ತವಾಗಿ ನಡೆಯುತ್ತಿತ್ತು' ಎಂದು ಆರೋಪಿಸಿದ್ದಾರೆ.

ವ್ಯಾಪಾರಿಗಳು ಮತ್ತು ಮಧ್ಯಮ ವರ್ಗದ ಜನರುಅಪಹರಣ, ಸುಲಿಗೆ ಮತ್ತು ದರೋಡೆಯಿಂದ ತತ್ತರಿಸಿ ಹೋಗಿದ್ದರುಎಂದು ದೂರಿದ್ದಾರೆ.

'ಯೋಗಿ ಸರ್ಕಾರವು ಐದು ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಇಂತಹ (ಅಪಹರಣ, ಸುಲಿಗೆ, ಗಲಭೆ, ದರೋಡೆ, ಮಾಫಿಯಾ) ಸನ್ನಿವೇಶಗಳಿಂದ ಹೊರ ತಂದಿದೆ. ಕಳೆದ ಸರ್ಕಾರಗಳ ಅವಧಿಯಲ್ಲಿ ನಡೆಯುತ್ತಿದ್ದ ಗಲಭೆಗಳನ್ನು ಉತ್ತರ ಪ್ರದೇಶದ ಪಶ್ಚಿಮ ಪ್ರದೇಶವು ಖಂಡಿತಾ ಮರೆಯುವುದಿಲ್ಲ.ಬಡವರು, ದೀನ ದಲಿತರು ಮತ್ತುಹಿಂದುಳಿದ ವರ್ಗದವರ ಮನೆ, ಜಮೀನು, ಅಂಗಡಿಗಳನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದು5 ವರ್ಷಗಳ ಹಿಂದೆ ಸಾಮಾನ್ಯವಾಗಿತ್ತು. ಜನರು ಊರು ತೊರೆಯುತ್ತಿದ್ದ ಸುದ್ದಿಗಳು ನಿತ್ಯ ವರದಿಯಾಗುತ್ತಿತ್ತು' ಎಂದು ಉಲ್ಲೇಖಿಸಿದ್ದಾರೆ.

ಹಾಗೆಯೇ,'ಹಿಂದಿನ ಸರ್ಕಾರ ತನ್ನ ಅವಧಿಯಲ್ಲಿ ಗೌತಮ ಬುದ್ಧ ನಗರದಲ್ಲಿ ಕೇವಲ73 ಮನೆಗಳನ್ನಷ್ಟೇ ನಿರ್ಮಿಸಿತ್ತು. ಆದರೆ,ಯೋಗಿ ಸರ್ಕಾರವು 5 ವರ್ಷಗಳಲ್ಲಿ23,000 ಮನೆಗಳನ್ನು ನಿರ್ಮಿಸಿ, ನಗರ ಪ್ರದೇಶದ ಬಡವರಿಗೆ ವಿತರಿಸಿದೆ.73 ಮನೆಗಳೆಲ್ಲಿ? 23,000 ಮನೆಗಳೆಲ್ಲಿ? ಯೋಚಿಸಿ' ಎಂದೂ ಹೇಳಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್‌ 10ರಂದು ಫಲಿತಾಂಶ ಪ್ರಕಟವಾಗಲಿದೆ.ಏಳು ಹಂತಗಳ ಮತದಾನವು ಕ್ರಮವಾಗಿ ಫೆಬ್ರವರಿ10,14, 20, 23, 27, ಮಾರ್ಚ್‌ 3 ಮತ್ತು 7ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT