ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ: 6 ಜಿಲ್ಲೆಗಳಲ್ಲಿ ರಸ್ತೆಗಳಿಗೆ ಕಲ್ಯಾಣ್‌ ಸಿಂಗ್ ಹೆಸರು

Last Updated 23 ಆಗಸ್ಟ್ 2021, 8:17 IST
ಅಕ್ಷರ ಗಾತ್ರ

ಲಖನೌ:ಉತ್ತರ ಪ್ರದೇಶದ ಲಖನೌ, ಅಯೋಧ್ಯಾ ಸಹಿತ ಆರು ಜಿಲ್ಲೆಗಳಲ್ಲಿ ತಲಾ ಒಂದೊಂದು ರಸ್ತೆಗಳಿಗೆ ಮಾಜಿ ಮುಖ್ಯಮಂತ್ರಿ ಕಲ್ಯಾಣ್‌ ಸಿಂಗ್ ಅವರ ಹೆಸರು ಇಡಲಾಗುವುದು ಎಂದು ರಾಜ್ಯ ಸರ್ಕಾರ ಸೋಮವಾರ ಘೋಷಿಸಿದೆ.

‘ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಒಂದು ರಸ್ತೆಗೆ ಕಲ್ಯಾಣ್‌ ಸಿಂಗ್ ಹೆಸರು ಇಡಲಾಗುವುದು. ಲಖನೌ, ಅಯೋಧ್ಯೆಯ ಜತೆಗೆ ಅಲಿಗಡ, ಇಟಾ, ಬುಲಂದ್‌ಶೆಹರ್‌ ಮತ್ತು ಪ್ರಯಾಗ್‌ರಾಜ್‌ ಜಿಲ್ಲೆಗಳಲ್ಲಿ ಈ ನಾಮಕರಣ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಇಲಾಖೆ ಪ್ರಸ್ತಾವ ಸಿದ್ಧಪಡಿಸುತ್ತಿದೆ’ ಎಂದು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT