ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ₹ 5 ಕೋಟಿಗೆ ಏರಿಕೆ –ಯೋಗಿ

Last Updated 31 ಮೇ 2022, 13:19 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ (ಎಂಎಲ್‌ಎಎಲ್‌ಎಡಿ) ಅನುದಾನವನ್ನು ₹ 3 ಕೋಟಿಯಿಂದ ₹ 5 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಪ್ರಕಟಿಸಿದ್ದಾರೆ.

ಯೋಗಿಯ ಈ ಘೋಷಣೆಯನ್ನು ವಿಧಾನಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರು ಬೆಂಬಲಿಸಿದ್ದಾರೆ.ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಎಂಎಲ್‌ಎಎಲ್‌ಎಡಿ ಅನುದಾನ ಬಳಕೆಯಾಗುತ್ತದೆ.

ವಿರೋಧ ಪಕ್ಷವಾಗಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್‌ ಈ ಬಗ್ಗೆ ಮಾತನಾಡಿದ್ದು, ಎಂಎಲ್‌ಎಎಲ್‌ಎಡಿ ಅನುದಾನದ ಮೊತ್ತ ಹೆಚ್ಚಾಗಬೇಕು ಎಂದು ಎಲ್ಲ ಸದಸ್ಯರೂ ಬಯಸಿದ್ದರು. ವಿಧಾನಸಭೆ ನಾಯಕರು ಮುಖ್ಯಮಂತ್ರಿಯವರ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.

ಯೋಗಿ ಅವರು ಕಳೆದ ಬಾರಿ (2017–2022) ತಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಅನುದಾನದ ಮೊತ್ತವನ್ನು 2020ರಲ್ಲಿ ₹ 2 ಕೋಟಿಯಿಂದ ₹ 3 ಕೋಟಿಗೆ ಹೆಚ್ಚಿಸಿದ್ದರು. ಅದಕ್ಕೂ ಮುನ್ನ 2019ರಲ್ಲಿ ₹ 1.5 ಕೋಟಿಯಿಂದ ₹ 2 ಕೋಟಿಗೆ ಏರಿಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT