ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ | ತರಗತಿ ಕೊಠಡಿಯಲ್ಲೇ ಉಳಿದ 5 ವರ್ಷದ ಮಗು; ಶಿಕ್ಷಕರ ವಿರುದ್ಧ ಕ್ರಮ

Last Updated 9 ಜುಲೈ 2022, 13:45 IST
ಅಕ್ಷರ ಗಾತ್ರ

ಲಖನೌ: ಐದು ವರ್ಷದ ವಿದ್ಯಾರ್ಥಿಯೊಬ್ಬ ಕೊಠಡಿಯಲ್ಲೇಉಳಿದಿರುವುದನ್ನುಗಮನಿಸದ ಸರ್ಕಾರಿ ಶಾಲೆಯಸಿಬ್ಬಂದಿ, ಬೀಗ ಹಾಕಿಕೊಂಡು ಹೋಗಿದ್ದ ಪ್ರಕರಣ ಉತ್ತರ ಪ್ರದೇಶದಲ್ಲಿ ಬಲ್ಲಿಯಾ ಜಿಲ್ಲೆಯಲ್ಲಿ ವರದಿಯಾಗಿತ್ತು. ಈ ಸಂಬಂಧ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಲಾಗಿದ್ದು, ಐವರು ಸಹ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಆದಿತ್ಯ ಎಂಬ ವಿದ್ಯಾರ್ಥಿಯು ಗುರುವಾರ ಕೊಠಡಿಯಲ್ಲೇ ಉಳಿದುಕೊಂಡಿದ್ದ. ನಂತರ ಪೋಷಕರು ಕೊಠಡಿಯ ಬಾಗಿಲು ಮುರಿದುಮಗುವನ್ನು ರಕ್ಷಿಸಿದ್ದರು.ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ, ಅಧಿಕಾರಿಗಳು ಶುಕ್ರವಾರ ತನಿಖೆಗೆ ಆದೇಶಿಸಿದ್ದರು.

'ಬೇಜವಾಬ್ದಾರಿ ತೋರಿದ ಆರೋಪದ ಮೇಲೆ ಸುಖಪುರ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಊರ್ಮಿಳಾ ದೇವಿ ಅವರನ್ನು ಅಮಾನತು ಮಾಡಲಾಗಿದೆ. ಉಳಿದ ಐವರು ಶಿಕ್ಷಕರಾದ ಅಫ್ರೋಜ್‌ ಅರಾ, ಪ್ರಿಯಾಂಕಾ ಯಾದವ್‌, ಶಾಂತಿ ಗೊಂಡ್‌, ಮೀರಾ ದೇವಿ ಮತ್ತು ಸುರೇಂದ್ರ ನಾಥ್‌ ಅವರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಆದೇಶವನ್ನು ತಡೆಹಿಡಿಯಲಾಗಿದೆ' ಎಂದು ಬಲ್ಲಿಯಾದ ಬಿಇಒ ಮಣಿರಾಮ್‌ ಸಿಂಗ್‌ ಹೇಳಿದ್ದಾರೆ.

ಶಾಲಾ ಅವಧಿಮುಕ್ತಾಯವಾದ ಸಂದರ್ಭದಲ್ಲಿ ಆದಿತ್ಯ, ತರಗತಿ ಕೋಣೆಯಲ್ಲಿಯೇ ಮಲಗಿಬಿಟ್ಟಿದ್ದ. ಸಿಬ್ಬಂದಿಯು ಇದನ್ನು ಗಮನಿಸದೆ ಕೊಠಡಿಗೆ ಬೀಗ ಹಾಕಿದ್ದರು ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT