ಮಗ್ಗಿ ಹೇಳದ್ದಕ್ಕೆ ಡ್ರಿಲ್ ಮೆಶಿನ್‌ನಿಂದ ವಿದ್ಯಾರ್ಥಿಯ ಕೈ ಕೊರೆದ ಶಿಕ್ಷಕ

ಕಾನ್ಪುರ: ಮಗ್ಗಿ ತಪ್ಪಾಗಿ ಹೇಳಿದ ಕಾರಣಕ್ಕೆ 9 ವರ್ಷದ ಅಪ್ರಾಪ್ತ ಬಾಲಕನ ಕೈಯನ್ನು ಪವರ್ ಡ್ರಿಲ್ ಮೆಶಿನ್‌ನಿಂದ ಕೊರೆದು ಶಿಕ್ಷಕ ಗಾಯಗೊಳಿಸಿರುವ ಘಟನೆ ವರದಿಯಾಗಿದೆ.
ಕಾನ್ಪುರದ ಪ್ರೇಮ್‌ನಗರ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಘಟನೆ ನಡೆದಿದೆ. ಶಿಕ್ಷಕನನ್ನು ಅನುಜ್ ಪಾಂಡೆ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: ಕಾಶ್ಮೀರದ 3 ಜಿಲ್ಲೆಗಳು ಉಗ್ರರಿಂದ ಮುಕ್ತ: ಎಡಿಜಿಪಿ
ದುರಸ್ತಿ ನಡೆಯುತ್ತಿದ್ದ ಶಾಲೆಯ ಗ್ರಂಥಾಲಯದಲ್ಲಿ ಮೇಲುಸ್ತುವಾರಿ ವಹಿಸುತ್ತಿದ್ದ ಶಿಕ್ಷಕ, ಅಲ್ಲಿ ಹಾದು ಹೋಗುತ್ತಿದ್ದ ವಿದ್ಯಾರ್ಥಿಯಲ್ಲಿ ಮಗ್ಗಿ ಹೇಳಲು ತಿಳಿಸುತ್ತಾನೆ. ಆದರೆ ವಿದ್ಯಾರ್ಥಿಗೆ ಮಗ್ಗಿ ಬಾರದ್ದಕ್ಕೆ ಕುಪಿತಗೊಂಡು ವಿದ್ಯುತ್ ಚಾಲಿತ ಡ್ರಿಲ್ ಮೆಶಿನ್ ಬಳಸಿ ಕೈ ಕೊರೆದು ಗಾಯಗೊಳಿಸುತ್ತಾನೆ.
ಗುರುವಾರ ಈ ಘಟನೆ ನಡೆದಿದ್ದು, ಬಾಲಕನ ಪೋಷಕರು ಹಾಗೂ ಮಕ್ಕಳು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ಶಿಕ್ಷಕನನ್ನು ಅಮಾನತುಗೊಳಿಸಿರುವ ಶಿಕ್ಷಣಾಧಿಕಾರಿ ತನಿಖೆಗಾಗಿ ಮೂವರು ಸದಸ್ಯರ ತಂಡವನ್ನು ರಚಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.