ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡದಲ್ಲಿ ಜೂನ್ 9ರವರೆಗೆ ಕೊರೊನಾ ಕರ್ಫ್ಯೂ ವಿಸ್ತರಣೆ; ಸ್ವಲ್ಪ ಸಡಿಲಿಕೆ

Last Updated 31 ಮೇ 2021, 9:48 IST
ಅಕ್ಷರ ಗಾತ್ರ

ಡೆಹರಾಡೂನ್: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಉತ್ತರಾಖಂಡ ಸರ್ಕಾರ ಸೋಮವಾರ 'ಕೊರೊನಾ ಕರ್ಫ್ಯೂ'ವನ್ನು ಜೂನ್ 9 ರವರೆಗೆ ವಿಸ್ತರಿಸಿದೆ.

ಈಗ ಸ್ವಲ್ಪ ಕರ್ಫ್ಯೂ ಸಡಿಲಿಕೆ ನೀಡಲು ನಿರ್ಧರಿಸಲಾಗಿದೆ. ಕಿರಾಣಿ ಅಂಗಡಿಗಳು ವಾರದಲ್ಲಿ ಎರಡು ದಿನ ಜೂನ್ 1 ಮತ್ತು ಜೂನ್ 7 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ತೆರೆಯುತ್ತವೆ ಎಂದು ಉತ್ತರಾಖಂಡ ಸರ್ಕಾರದ ವಕ್ತಾರ ಸುಬೋಧ್ ಯುನಿಯಾಲ್ ಮಾಹಿತಿ ನೀಡಿದ್ದಾರೆ.

ಈ ಮೊದಲು ಕಿರಾಣಿ ಅಂಗಡಿಗಳು ಬೆಳಿಗ್ಗೆ 8 ರಿಂದ 11 ರವರೆಗೆ ಒಂದು ದಿನ ಮಾತ್ರ ತೆರೆಯುತ್ತಿದ್ದವು.

ಇದಲ್ಲದೆ, ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳ ಅಂಗಡಿಗಳು ಸಹ ಜೂನ್ 1 ರಂದು ಮಾತ್ರ ಒಂದು ದಿನ ತೆರೆಯಲ್ಪಡುತ್ತವೆ ಮತ್ತು ಇತರ ಎಲ್ಲ ನಿರ್ಬಂಧಗಳು ಮುಂದುವರಿಯುತ್ತವೆ.

ಈಮಧ್ಯೆ, ಉತ್ತರಾಖಂಡವು ಕಳೆದ 24 ಗಂಟೆಗಳಲ್ಲಿ 1,226 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 32 ಸಾವುಗಳನ್ನು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT