ಶುಕ್ರವಾರ, ಅಕ್ಟೋಬರ್ 23, 2020
24 °C

ಲಸಿಕೆ: ಬಾಲಕಿಯರೇ ಮುಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಲಸಿಕೆ ಕಾರ್ಯಕ್ರಮದ ಸ್ಥಿತಿಗತಿಯ ಮಾಹಿತಿಯನ್ನು ವರದಿ ಒದಗಿಸಿದೆ. 5 ವರ್ಷದೊಳಗಿನ ಮಕ್ಕಳಿಗೆ ಬಿಸಿಜಿ ಸೇರಿದಂತೆ ಹತ್ತಾರು ಲಸಿಕೆಗಳನ್ನು ಹಾಕಲಾಗುತ್ತದೆ. ಈ ವಯೋಮಾನದಲ್ಲಿ ಕನಿಷ್ಠ ಯಾವುದಾದರೂ ಒಂದು ಲಸಿಕೆಯನ್ನು ಹಾಕಿಸಿಕೊಂಡ ಮಕ್ಕಳ ಪ್ರಮಾಣ ಗ್ರಾಮೀಣ ಭಾಗದಲ್ಲಿ ಶೇ 97ರಷ್ಟಿದ್ದರೆ ನಗರದಲ್ಲಿ ಶೇ 98ರಷ್ಟಿದೆ.

ಆದರೆ ಸಂಪೂರ್ಣ ಲಸಿಕೆ ಕಾರ್ಯಕ್ರಮದ ಪ್ರಮಾಣ ಶೇ 60ನ್ನು ದಾಟಿಲ್ಲ. ಶೇ 59ರಷ್ಟು ಬಾಲಕರು ಹಾಗೂ ಶೇ 60ರಷ್ಟು ಬಾಲಕಿಯರಿಗೆ ಮಾತ್ರ ಪೂರ್ಣ ಪ್ರಮಾಣದ ಲಸಿಕೆ ಹಾಕಲಾಗಿದೆ. ಈ ವಿಚಾರದಲ್ಲಿ ಹುಡುಗಿಯರು ಹುಡುಗರಿಗಿಂತ ಮಂದಿದ್ದಾರೆ. ಪ್ರದೇಶವಾರು ನೋಡಿದರೆ, ಗ್ರಾಮೀಣ ಪ್ರದೇಶದವರು ಈ ವಿಚಾರದಲ್ಲಿ ಕೊಂಚ ಹಿಂದಿದ್ದಾರೆ. ಗ್ರಾಮೀಣ ಭಾಗದ ಶೇ 58ರಷ್ಟು ಮಕ್ಕಳು ಹಾಗೂ ನಗರದ ಶೇ 62ರಷ್ಟು ಮಕ್ಕಳಿಗೆ ಸಂಪೂರ್ಣ ಲಸಿಕೆಯ ಲಾಭ ಸಿಕ್ಕಿದೆ. 

ಸಂಪೂರ್ಣ ಲಸಿಕಾ ಕಾರ್ಯಕ್ರಮ ದಲ್ಲಿ ನಿಗದಿಪಡಿಸಲಾಗಿರುವ ಲಸಿಕೆಗಳು: ಬಿಸಿಜಿ, ಒಪಿವಿ–1, ಒಪಿವಿ–2, ಒಪಿವಿ–3, ಡಿಪಿಟಿ–1, ಡಿಪಿಟಿ–2, ಡಿಪಿಟಿ–3 ಮತ್ತು ದಡಾರ ಲಸಿಕೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು