ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಪೇಯಿ ಕುರಿತ ಪುಸ್ತಕ 25ರಂದು ಬಿಡುಗಡೆ

ಮಾಜಿ ಪ್ರಧಾನಿಯ ರಾಜಕೀಯ ಚಿಂತನೆ–ಸಾಧನೆ ಕಟ್ಟಿಕೊಡುವ ಪುಸ್ತಕ
Last Updated 20 ಡಿಸೆಂಬರ್ 2020, 10:34 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಪ್ರಧಾನಿ, ಬಿಜೆಪಿಯ ಹಿರಿಯ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರ ರಾಜಕೀಯ ಚಿಂತನೆಗಳು ಹಾಗೂ ಸಾಧನೆಗಳನ್ನು ಕಟ್ಟಿಕೊಡುವ ಪುಸ್ತಕ ’ವಾಜಪೇಯಿ: ದಿ ಇಯರ್ಸ್‌ ದಟ್‌ ಚೇಂಜ್ಡ್‌ ಇಂಡಿಯಾ‘ ಬಿಡುಗಡೆ ಸಿದ್ಧಗೊಂಡಿದೆ.

ವಾಜಪೇಯಿ ಅವರ 96ನೇ ಜಯಂತಿ ಕಾರ್ಯಕ್ರಮ ನಡೆಯುವ ಡಿ. 25ರಂದು ಈ ಪುಸ್ತಕ ಬಿಡುಗಡೆಯಾಗಲಿದೆ.

ಈ ಪುಸ್ತಕವನ್ನು ಶಕ್ತಿ ಸಿನ್ಹಾ ಬರೆದಿದ್ದಾರೆ. ವಾಜಪೇಯಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ (1996–97) ಸಿನ್ಹಾ ಅವರ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ನಂತರ (1998–99) ಅವರ ಆಪ್ತ ಕಾರ್ಯದರ್ಶಿಯಾಗಿದ್ದರು.

ಸದ್ಯ, ಸಿನ್ಹಾ ಅವರು ವಡೋದರಾದಲ್ಲಿರುವ ಎಂ.ಎಸ್‌ ವಿಶ್ವವಿದ್ಯಾಲಯದ ಅಟಲ್‌ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್‌ ಆಫ್‌ ಪಾಲಿಸಿ ರಿಸರ್ಚ್ ಆ್ಯಂಡ್ ಇಂಟರ್‌ನ್ಯಾಷನಲ್‌ ಸ್ಟಡೀಸ್‌ನ ಗೌರವ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ವಾಜಪೇಯಿ ಅವರನ್ನು ಜನರು ಬಹಳ ಗೌರವದಿಂದ ಸ್ಮರಿಸುತ್ತಾರೆ. ಆದರೆ, 1998ರಲ್ಲಿ ಮೈತ್ರಿ ಸರ್ಕಾರವನ್ನು ಮುನ್ನಡೆಸಿಕೊಂಡು ಹೋಗುವಾಗ ಅವರು ಎದುರಿಸಿದ ಕಷ್ಟಗಳ ಬಗ್ಗೆ ಜನರಿಗೆ ಅರಿವಿಲ್ಲ’ ಎಂದು ಸಿನ್ಹಾ ಅಭಿಪ್ರಾಯಪಡುತ್ತಾರೆ.

‘ಮೈತ್ರಿ ಸರ್ಕಾರ ಮುನ್ನಡೆಸಿಕೊಂಡು ಹೋಗುವ ಸಂದಿಗ್ಧ ಪರಿಸ್ಥಿತಿಯಿದ್ದರೂ ಅವರು ಹಲವಾರು ಪ‍್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಒಂದೆಡೆ ಅಣ್ವಸ್ತ್ರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದರೆ, ಮತ್ತೊಂದೆಡೆ ಪಾಕಿಸ್ತಾನಕ್ಕೆ ಸ್ನೇಹ ಹಸ್ತ ಚಾಚಿದರು. ಕಾರ್ಗಿಲ್‌ ಯುದ್ಧವನ್ನು ಸಮರ್ಥವಾಗಿ ನಿಭಾಯಿಸಿದರು’ ಎಂದು ಸಿನ್ಹಾ ಅವರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.

300 ಪುಟಗಳ ಈ ಪುಸ್ತಕವನ್ನು ಪೆಂಗ್ವಿನ್‌ ಸಂಸ್ಥೆ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT