ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗೋವು ಅಪ್ಪಿಕೊ ದಿನ’: ಕರೆ ಹಿಂಪಡೆದ ಭಾರತೀಯ ಪ್ರಾಣಿ ಅಭಿವೃದ್ಧಿ ಮಂಡಳಿ

Last Updated 10 ಫೆಬ್ರುವರಿ 2023, 15:46 IST
ಅಕ್ಷರ ಗಾತ್ರ

ನವದೆಹಲಿ: ಫೆ.14ರಂದು ಪ್ರೇಮಿಗಳ ದಿನದ ಬದಲು ‘ಗೋವು ಅಪ್ಪಿಕೊ ದಿನ’ವನ್ನು ಆಚರಿಸಿ ಎಂದು ಬುಧವಾರ ನೀಡಿದ್ದ ಕರೆಯನ್ನು ಭಾರತೀಯ ಪ್ರಾಣಿ ಅಭಿವೃದ್ಧಿ ಮಂಡಳಿ ಶುಕ್ರವಾರ ಹಿಂಪಡೆದಿದೆ. ಈ ಕರೆಯನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರವು ಮಂಡಳಿಗೆ ಸೂಚಿಸಿತ್ತು.

‘ಮಂಡಳಿಯ ಕ್ರಮಕ್ಕೆ ತೀವ್ರ ಟೀಕೆಗಳು ವ್ಯಕ್ತವಾಗಿದೆ. ಸಾರ್ವಜನಿಕರು ಅದರಲ್ಲೂ ಯುವಕರಿಗೆ ಸರ್ಕಾರದ ಬಗ್ಗೆ ತಪ್ಪು ಅನಿಸಿಕೆ ಮೂಡಬಾರದು ಎನ್ನುವ ಕಾರಣಕ್ಕೆ ‘ಗೋವು ಅಪ್ಪಿಕೊ ದಿನ’ ಆಚರಿಸಲು ನೀಡಿರುವ ಕರೆಯನ್ನು ಹಿಂಪಡೆಯಲು ಸೂಚಿಸಲಾಗಿದೆ’ ಎಂದು ಪಶು ಸಂಗೋಪನೆ ಸಚಿವಾಲಯ ಹೇಳಿದೆ.

ಮಂಡಳಿಯ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ವಿವಾದವೂ ಎದ್ದಿತ್ತು. ಜೊತೆಗೆ, ಈ ಬಗ್ಗೆ ನೂರಾರು ಮೀಮ್ಸ್‌ಗಳು, ಜೋಕ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

‘ಗೋವು ಅಪ್ಪಿಕೊ ದಿನಕ್ಕೆ ನೀಡಿದ್ದ ಕರೆಯನ್ನು ವಾಪಸು ಪಡೆಯಬೇಕು ಎಂದು ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆ ಸಚಿವಾಲಯವು ನಿರ್ದೇಶಿಸಿದೆ. ಇದರ ಅನ್ವಯ ಕರೆಯನ್ನು ಹಿಂಪಡೆಯಲಾಗಿದೆ’ ಎಂದು ಭಾರತೀಯ ಪ್ರಾಣಿ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಎಸ್‌.ಕೆ. ದತ್ತಾ ಅವರು ಹೇಳಿರುವ ಪತ್ರವನ್ನು ಮಂಡಳಿಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ.

‘ಪಾಶ್ಚಿಮಾತ್ಯ ಸಂಸ್ಕೃತಿಯು ವ್ಯಾಪಾಕವಾಗಿ ಹಬ್ಬುತ್ತಿರುವುದರಿಂದಾಗಿ ಭಾರತದ ವೇದ ಸಂಸ್ಕೃತಿಯು ‘ಅಳಿವಿನ ಅಂಚಿಗೆ’ ಸರಿದಿದೆ. ಇದಕ್ಕಾಗಿ ಗೋವು ಅಪ್ಪಿಕೊ ದಿನವನ್ನು ಆಚರಿಸಬೇಕು’ ಎಂದು ಮಂಡಳಿ ಈ ಹಿಂದೆ ಹೇಳಿತ್ತು.

ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಹೈನುಗಾರಿಕೆ ಸಚಿವ ಪುರುಷೋತ್ತಮ್‌ ರೂಪಾಲಾ ಅವರು ಕೂಡ ಮಂಡಳಿಯ ಈ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ‘ಮಂಡಳಿಯು ನೀಡಿರುವ ಕರೆಯನ್ನು ಸಾರ್ವಜನಿಕರು ಆಚರಿಸಿದರೆ ಒಳ್ಳೆಯದಾಗುತ್ತದೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT