ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜ ಪ್ರೀತಿ: ಹೆಂಡತಿಯ ಚಿತಾಭಸ್ಮದೊಂದಿಗೆ 32 ವರ್ಷದಿಂದ ಬದುಕುತ್ತಿರುವ 92ರ ವೃದ್ಧ

Last Updated 14 ಫೆಬ್ರುವರಿ 2022, 14:11 IST
ಅಕ್ಷರ ಗಾತ್ರ

ಪಟ್ನಾ: ಜಗತ್ತು ಪ್ರೇಮಿಗಳ ದಿನಾಚರಣೆಯಲ್ಲಿ ಮುಳುಗಿದೆ. ಇದೇ ಹೊತ್ತಿನಲ್ಲಿ, ಬಿಹಾರದ ಸೀಮಾಂಚಲ ಪ್ರಾಂತ್ಯದ 90 ವರ್ಷದ ವ್ಯಕ್ತಿಯೊಬ್ಬರು ತಮ್ಮ ಮಡದಿಯ ಚಿತಾಭಸ್ಮದೊಂದಿಗೆ32 ವರ್ಷಗಳಿಂದ ಬದುಕು ಸಾಗಿಸುತ್ತಿದ್ದು, ಜನಮನ ಗೆದ್ದಿದ್ದಾರೆ.

ಹೆಂಡತಿಯ ಮೇಲಿನ ಅತೀವ ಪ್ರೇಮದಿಂದಾಗಿ ಈ ರೀತಿ ಜೀವಿಸುತ್ತಿರುವ ವ್ಯಕ್ತಿಯ ಹೆಸರುಭೋಲಾ ನಾಥ್ ಅಲೋಕ್.ಪುರ್ಣಿಯಾ ಜಿಲ್ಲೆಯ ಸಿಪಾಹಿ ತೊಲಾದ ನಿವಾಸಿ.

ಸದ್ಯಅಲೋಕ್ ಅವರು ತಮ್ಮ ಹೆಂಡತಿಯ ಚಿತಾಭಸ್ಮವನ್ನು ಮನೆಯ ಆವರಣದಲ್ಲಿರುವ ಮಾವಿನ ಮರಕ್ಕೆ ತೂಗು ಹಾಕಿದ್ದಾರೆ. ಜೊತೆಗೆ, ತಾವು ನಿಧನರಾದಾಗ ಮಡದಿಯ ಚಿತಾಭಸ್ಮದೊಂದಿಗೇ ತಮ್ಮ ಅಂತ್ಯಸಂಸ್ಕಾರ ಮಾಡುವಂತೆ ಕುಟುಂಬದವರಿಗೆ ಮನವಿ ಮಾಡಿಕೊಂಡಿದ್ದಾರೆ.

ಭೋಲಾ ನಾಥ್ ಅವರ ಕುರಿತು ಪುಸ್ತಕವೊಂದನ್ನು ಬರೆದಿರುವರಾಮ್ ನರೇಶ್ ಭಕ್ತ್ ಎನ್ನುವವರು, ಇತ್ತೀಚಿನ ದಿನಗಳಲ್ಲಿ ಅಪರೂಪವೆನಿಸಿರುವ 'ನೈಜ ಪ್ರೀತಿಯ ಸಂಕೇತ ಅಲೋಕ್' ಎಂದು ಅಭಿಪ್ರಾಯಪಟ್ಟಿದ್ದಾರೆ.

'ಅಲೋಕ್ ಅವರ ‍ಪತ್ನಿ ಪದ್ಮ ರಾಣಿ 32 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಆಕೆಯ ಮೇಲಿನ ಪ್ರೀತಿ ಮತ್ತು ಸ್ಮರಣಾರ್ಥವಾಗಿ ಚೀತಾಭಸ್ಮವನ್ನು ಸಂರಕ್ಷಿಸಿ, ಮಾವಿನ ಮರದಲ್ಲಿ ತೂಗುಹಾಕಿದ್ದಾರೆ. ಅವರ ನೆನಪಿಗಾಗಿ ನಿತ್ಯವೂ ಗುಲಾಬಿ ಹೂ ಇಟ್ಟು ಪ್ರಾರ್ಥನೆ ಸಲ್ಲಿಸುತ್ತಾರೆ'

'ಪತ್ನಿ ಬದುಕಿದ್ದಾಗಲೂ ಅಪಾರವಾಗಿ ಪ್ರೀತಿಸುತ್ತಿದ್ದ ಅವರು (ಅಲೋಕ್), ಆಕೆ ತಮ್ಮನ್ನು ಅಗಲುವುದನ್ನು ಎಣಿಸಿರಲಿಲ್ಲ. 32 ವರ್ಷ ಎಂಬುದು ದೀರ್ಘವಾದದ್ದು. ಆದರೆ, ಅವರು ಪ್ರತಿ ನಿತ್ಯವೂ ಹೆಂಡತಿಯನ್ನು ನೆನಪಿಸಿಕೊಳ್ಳುತ್ತಾರೆ. ಹಾಗೆಯೇ, ಗೌರವ ಮತ್ತು ಪ್ರಾರ್ಥನೆಯನ್ನು ಸಲ್ಲಿಸಿ ನಿಷ್ಕಲ್ಮಶ ಪ್ರೇಮವನ್ನು ವ್ಯಕ್ತಪಡಿಸುತ್ತಾರೆ' ಎಂದುನರೇಶ್ ಹೇಳಿದ್ದಾರೆ.

'ಅಷ್ಟಲ್ಲದೆ, ಅವರು ತಾವು ನಿಧನರಾದಾಗ ತಮ್ಮ ಎದೆಯ ಮೇಲೆ ಚಿತಾಭಸ್ಮವನ್ನು ಇರಿಸಿ ಅಂತ್ಯಸಂಸ್ಕಾರ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ಇಂತಹ ಗೌರವ, ಪ್ರೀತಿಯನ್ನು ಇತ್ತೀಚಿನ ದಿನಗಳಲ್ಲಿ ಕಾಣುವುದು ಅಪರೂಪ. ಇಂತಹ ಯಾವುದಾದರೂ ಉದಾಹರಣೆಗಳನ್ನು ಕಳೆದ ಹಲವು ವರ್ಷಗಳಲ್ಲಿ ಕಂಡ ನೆನಪಿಲ್ಲ ನನಗೆ' ಎಂದೂಅಲೋಕ್ ಅವರ ಬಗ್ಗೆಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT