ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದೇ ಭಾರತ್‌ ರೈಲಿಗೆ ಕಲ್ಲೆಸೆತ: ಸುಳ್ಳು ಸುದ್ದಿ ಎಂದ ಮಮತಾ ಬ್ಯಾನರ್ಜಿ

ಇದು ಬಂಗಾಳವನ್ನು ಅವಮಾನಿಸುವ ಕೃತ್ಯ ಎಂದ ಮಮತಾ
Last Updated 5 ಜನವರಿ 2023, 14:34 IST
ಅಕ್ಷರ ಗಾತ್ರ

ಕೋಲ್ಕತಾ: ವಂದೇ ಭಾರತ್‌ ಎಕ್ಸ್‌ಪ್ರೆಸ್ ರೈಲಿಗೆ ಪಶ್ಚಿಮ ಬಂಗಾಳದಲ್ಲಿ ಕಲ್ಲೆಸೆಯಲಾಗಿದೆ ಎನ್ನುವ ಸುದ್ದಿ ಸುಳ್ಳು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ಕಳೆದ ಮೂರು ದಿನಗಳಿಂದ ಬಂಗಾಳಕ್ಕೆ ಅವಮಾನ ಮಾಡುತ್ತಿರುವ ಟಿ.ವಿ ಚಾನೆಲ್‌ಗಳಿಗೆ ಹೇಳುತ್ತೇನೆ. ಬಂಗಾಳವನ್ನು ಅವಮಾನಿಸಿ, ಜನರಿಗೆ ಸುಳ್ಳು ಸುದ್ದಿ ತೋರಿಸಿ ಬಂಗಾಳಕ್ಕೆ ಅಪಖ್ಯಾತಿ ತಂದಿದ್ದಾರೆ. ಇದರ ಬಗ್ಗೆ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ‘ ಎಂದು ಹೇಳಿದ್ದಾರೆ.

‘ಇದು ಪಶ್ಚಿಮ ಬಂಗಾಳಲ್ಲಿ ನಡೆದಿದ್ದು ಅಲ್ಲ. ಇದು ಬಿಹಾರದಲ್ಲಿ ನಡೆದ ಘಟನೆ. ಬಿಹಾರದ ಜನರಿಗೆ ಸಮಸ್ಯೆ ಇರಬಹುದು. ಹೀಗಾಗಿ ಅವರು ಏನೋ ಮಾಡಿರಬಹುದು. ಬಿಹಾರವನ್ನು ಅವಮಾನ ಮಾಡುವುದು ಕೂಡ ಕಾನೂನು ಬಾಹಿರ. ಅಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲ ಎಂದು ಅವರಿಗೂ ಈ ಸೇವೆ ಸಿಗದಂತೆ ಮಾಡುವುದು ಸರಿಯಲ್ಲ‘ ಎಂದು ಅವರು ಹೇಳಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಆರಂಭವಾಗಿದ್ದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಕಲ್ಲೆಸೆಯಲಾಗಿದೆ ಎಂದು ಪೂರ್ವ ರೈಲ್ವೇ ಹೇಳಿತ್ತು.

ಇದು ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್‌ ಹಾಗೂ ವಿಪಕ್ಷ ಬಿಜೆಪಿ ನಡುವಿನ ಕಾಳಗಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT