ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಾಮನ ಬಗ್ಗೆ ವಹೇಳನಕಾರಿ ಹೇಳಿಕೆ: ಪ್ರಾಧ್ಯಾಪಕಿ ಕೆಲಸದಿಂದ ವಜಾ

Last Updated 24 ಏಪ್ರಿಲ್ 2022, 17:07 IST
ಅಕ್ಷರ ಗಾತ್ರ

ಫಗ್ವಾರ, ಪಂಜಾಬ್‌ (ಪಿಟಿಐ):ಲವ್ಲಿ ಪ್ರೊಫೆಷನಲ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯೊಬ್ಬರು ಶ್ರೀರಾಮನ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದಕ್ಕೆ ಕಾಲೇಜಿನ ಆಡಳಿತ ಮಂಡಳಿಯು ಅವರನ್ನು ಕೆಲಸದಿಂದ ತೆಗೆದುಹಾಕಿದೆ.

ಗುರ್‌ಸಂಗ್‌ ಪ್ರೀತ್‌ ಕೌರ್‌ ಕೆಲಸದಿಂದ ವಜಾಗೊಂಡಸಹಾಯಕ ಪ್ರಾಧ್ಯಾಪಕಿ. ಇವರು ಶ್ರೀ ರಾಮನ ಬಗ್ಗೆ ಕೆಟ್ಟ ಪದಗಳನ್ನು ಬಳಸಿ, ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋವನ್ನು ವೀಕ್ಷಿಸಿದ ಜನರು ಆಕೆಯನ್ನು ಕೆಲಸದಿಂದ ತೆಗೆದುಹಾಕುವಂತೆ ಒತ್ತಡ ಹಾಕಿದ್ದರು.

ಗುರ್‌ಸಂಗ್‌ ಅವರನ್ನು ವಜಾಗೊಳಿಸಿದ ಆಡಳಿತ ಮಂಡಳಿ, ‘ಪ್ರಾಧ್ಯಾಪಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿಷಯಗಳೆಲ್ಲ ಅವರ ವೈಯಕ್ತಿಕ. ಕಾಲೇಜು ಇಂತಹ ಕೆಲಸಗಳನ್ನು ಅನುಮೋದಿಸುವುದಿಲ್ಲ’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT