ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತದ ರಾಶಿಗೆ ಬೆಂಕಿ ಹಚ್ಚಿದ ರೈತರ ವಿಡಿಯೊವನ್ನು ಹಂಚಿಕೊಂಡ ವರುಣ ಗಾಂಧಿ

ಕೃಷಿ ನೀತಿಗಳ ಮರುಪರಿಶೀಲನೆ ಅಗತ್ಯ: ಸಂಸದ ವರುಣ್ ಗಾಂಧಿ
Last Updated 23 ಅಕ್ಟೋಬರ್ 2021, 9:13 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ರೈತರೊಬ್ಬರು ಬೆಳೆದ ಭತ್ತವನ್ನು ಮಾರಾಟ ಮಾಡಲಾಗದೇ, ನೊಂದು ಫಸಲಿಗೆ ಬೆಂಕಿ ಹಚ್ಚುತ್ತಿರುವ ವಿಡಿಯೊ ತುಣುಕನ್ನು ಬಿಜೆಪಿ ಸಂಸದ ವರುಣ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಈ ವಿಡಿಯೊ ಜೊತೆಗೆ ‘ನಮ್ಮ ಕೃಷಿ ನೀತಿಗಳನ್ನು ಮರುಪರಿಶೀಲಿಸಬೇಕು‘ ಎಂದು ಅವರು ಬರೆದಿದ್ದಾರೆ.

‘ಉತ್ತರ ಪ್ರದೇಶದ ರೈತ ಸಮೋದ್‌ ಸಿಂಗ್‌, ಬೆಳೆದ ಭತ್ತವನ್ನು ಮಾರಲು ಹದಿನೈದು ದಿನದಿಂದ ಎಲ್ಲ ಮಂಡಿಗಳಿಗೂ ಅಲೆದಾಡಿದ್ದಾರೆ. ಮಾರಲಾಗದೇ ಹತಾಶೆಯಿಂದ ಬೆಳೆಗೆ ಬೆಂಕಿ ಇಟ್ಟಿದ್ದಾರೆ. ಈ ವ್ಯವಸ್ಥೆ ರೈತರನ್ನು ಎಲ್ಲಿಗೆ ತಂದಿದೆ? ನಮ್ಮ ಕೃಷಿ ನೀತಿಗಳನ್ನು ಮರುಪರಿಶೀಲಿಸುವ ಅಗತ್ಯವಿದೆ‘ ಎಂದೂ ತಿಳಿಸಿದ್ದಾರೆ.

ಮೂರು ಕೃಷಿ ಕಾಯ್ದೆಗಳ ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಈಗಾಗಲೇ ಸಹಾನುಭೂತಿ ಪ್ರದರ್ಶಿಸಿರುವ ವರುಣ್ ಗಾಂಧಿ ಅವರು, ಕೇಂದ್ರದ ವಿರುದ್ಧ ನೇರ ದಾಳಿ ನಡೆಸದೇ, ಕೃಷಿ ಸಂಬಂಧಿತ ವಿಚಾರಗಳನ್ನು ತಡವಾಗಿ ನಿರ್ವಹಣೆ ಮಾಡುತ್ತಿರುವ ಕ್ರಮವನ್ನು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT