ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಮಾಲೀಕತ್ವ ವರ್ಗಾವಣೆ ನಿಯಮಗಳಲ್ಲಿ ಬದಲಾವಣೆ

Last Updated 2 ಮೇ 2021, 18:01 IST
ಅಕ್ಷರ ಗಾತ್ರ

ನವದೆಹಲಿ: ವಾಹನದ ನೋಂದಣಿ ಪ್ರಮಾಣಪತ್ರದಲ್ಲಿ ವ್ಯಕ್ತಿಯೊಬ್ಬರ ನಾಮನಿರ್ದೇಶನ (ನಾಮಿನಿ) ಮಾಡಿ, ಹೆಸರು ಸೇರ್ಪಡೆಗೆ ವಾಹನ ಮಾಲೀಕಗೆ ಅವಕಾಶ ನೀಡುವುದು ಸೇರಿದಂತೆ ಕೇಂದ್ರ ಮೋಟಾರು ವಾಹನಗಳ ಕಾಯ್ದೆಯ ನಿಯಮಗಳಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ.

ವಾಹನವೊಂದರ ಮಾಲೀಕ ಸಾವಿಗೀಡಾದ ಸಂದರ್ಭದಲ್ಲಿ ಆ ವಾಹನವನ್ನು ನಾಮನಿರ್ದೇಶಿತ ವ್ಯಕ್ತಿಯ ಹೆಸರಿನಲ್ಲಿ ನೋಂದಣಿ ಮಾಡಬಹುದು ಇಲ್ಲವೇ ಆ ವ್ಯಕ್ತಿಗೆ ವಾಹನದ ಮಾಲೀಕತ್ವದ ವರ್ಗಾವಣೆಗೆ ನಿಯಮದಲ್ಲಿನ ಬದಲಾವಣೆ ಅವಕಾಶ ಕಲ್ಪಿಸಲಿದೆ.

ಈ ಕುರಿತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಸೂಚನೆಯನ್ನು ಪ್ರಕಟಿಸಿದೆ.

ವಾಹನ ನೋಂದಣಿ ಸಮಯದಲ್ಲಿ ನಾಮಿನಿಯ ಹೆಸರನ್ನು ಪ್ರಮಾಣಪತ್ರದಲ್ಲಿ ಸೇರಿಸಬಹುದು. ಇಲ್ಲವೇ ವಾಹನ ನೋಂದಣಿಯ ಬಳಿಕ ಆನ್‌ಲೈನ್‌ ಮೂಲಕವೂ ನಾಮಿನಿಯ ಹೆಸರನ್ನು ಪ್ರಮಾಣಪತ್ರದಲ್ಲಿ ಸೇರ್ಪಡೆ ಮಾಡಬಹುದಾಗಿದೆ.

‘ವಾಹನದ ಮಾಲೀಕ ಮೃತಪಟ್ಟ 30 ದಿನಗಳೊಳಗೆ ನಾಮಿನಿಯು, ಮಾಲೀಕನ ನಿಧನದ ಬಗ್ಗೆ ನೋಂದಣಿ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಆಗ, 3 ತಿಂಗಳ ಕಾಲ ಆತ ವಾಹನವನ್ನು ಬಳಸಬಹುದಾಗಿದೆ. ಬಳಿಕ, ಸಾಮಾನ್ಯ ಪ್ರಕ್ರಿಯೆ ಮೂಲಕ ವಾಹನದ ಮಾಲೀಕತ್ವದ ವರ್ಗಾವಣೆಗೆ ನಾಮಿನಿ ಅರ್ಜಿಸಲ್ಲಿಸಬಹುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಿಚ್ಛೇದನೆ, ಆಸ್ತಿಯಲ್ಲಿ ಪಾಲಾದ ಸಂದರ್ಭದಲ್ಲಿಯೂ ನಾಮಿನಿಯ ಹೆಸರಿನಲ್ಲಿ ಬದಲಾವಣೆ ಮಾಡಲು ಅವಕಾಶ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT