ಬುಧವಾರ, ಜೂನ್ 29, 2022
26 °C
ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಸೇರಿದಂತೆ ಇತರರಿಂದ ಪುಷ್ಪನಮನ

16 ಅಡಿ ಎತ್ತರದ ಕರುಣಾನಿಧಿಯ ಕಂಚಿನ ಪ್ರತಿಮೆ ಅನಾವರಣ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳುನಾಡಿನಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿದ್ದ ದಿವಂಗತ ಎಂ.ಕರುಣಾನಿಧಿ ಅವರ 16 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಉಪರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಶನಿವಾರ ಇಲ್ಲಿ ಅನಾವರಣಗೊಳಿಸಿದರು.

ನಗರದ ಒಮಂದುರಾರ್ ಎಸ್ಟೇಟ್‌ನಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ ಈ ಪ್ರತಿಮೆ ನಿರ್ಮಿಸಲಾಗಿದೆ. 35 ವರ್ಷಗಳ ಹಿಂದೆ ಎಐಎಡಿಎಂಕೆಯ ಸಂಸ್ಥಾಪಕ ಎಂ.ಜಿ. ರಾಮಚಂದ್ರನ್ ಅವರ ಸಾವಿನ ಬಳಿಕ ಕರುಣಾನಿಧಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಅಂದು ಪ್ರತಿಮೆ ಇದ್ದ ಸ್ಥಳದಿಂದ 100 ಮೀಟರ್  ದೂರದಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿದೆ.

ರಾಷ್ಟ್ರೀಯ ನಾಯಕ ಪೆರಿಯಾರ್ ಅವರೇ ಕರುಣಾನಿಧಿ ಅವರ ಪ್ರತಿಮೆ ಸ್ಥಾಪನೆಗೆ ಮುಂದಾಗಿದ್ದರು. ಆದರೆ, ಪೆರಿಯಾರ್ ಅವರ ಸಾವಿನ ಬಳಿಕ ಅವರ ಪತ್ನಿ ಅವರು ಕರುಣಾನಿಧಿ ಅವರ ಪ್ರತಿಮೆ ಸ್ಥಾಪಸಿದ್ದರು. ಆದರೆ ಈ ಪ್ರತಿಮೆಯನ್ನು ಎಂ.ಜಿ.ಆರ್ ಅವರ ಸಾವು ಸಂಭವಿಸಿದ್ದಾಗ ರಾಜಕೀಯ ಕಾರಣಗಳಿಗಾಗಿ ಕೆಲ ದುಷ್ಟ ಶಕ್ತಿಗಳು ಕೆಡವಿ ಹಾಕಿದ್ದವು ಎಂದು ಸ್ಟಾಲಿನ್ ಹೇಳಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು