ಬಿಜೆಪಿ ನಾಯಕರಿಗೆ ಪ್ರವೇಶವಿಲ್ಲ: ಉತ್ತರ ಪ್ರದೇಶದ ಗ್ರಾಮದಲ್ಲಿ ಬೋರ್ಡ್

ಲಖನೌ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿನ ಗ್ರಾಮವೊಂದಕ್ಕೆ ಬಿಜೆಪಿ ನಾಯಕರಿಗೆ ಪ್ರವೇಶವಿಲ್ಲ ಎಂಬ ಬೋರ್ಡ್ ಹಾಕಲಾಗಿದೆ.
ಲಯನ್ ಗ್ರಾಮದ ಅಲ್ಲಲ್ಲಿ ಬೋರ್ಡ್‌ಗಳನ್ನು ಸ್ಥಳೀಯರು ಅಳವಡಿಸಿದ್ದು, ಬಿಜೆಪಿ ನಾಯಕರಿಗೆ ಪ್ರವೇಶವಿಲ್ಲ. ಆದರೆ ರಾಷ್ಟ್ರೀಯ ಲೋಕ ದಳದ ನಾಯಕರು ಬರಬಹುದು, ನಿಮಗೆ ಸ್ವಾಗತ ಎಂದು ಬರೆಯಲಾಗಿದೆ.
ಸ್ಥಳೀಯ ಬಿಜೆಪಿ ಶಾಸಕ ತೇಜಿಂದರ್ ನರ್ವಾಲ್ ಕುರಿತು ಗ್ರಾಮಸ್ಥರು ತೀವ್ರ ಆಕ್ರೋಶ ಹೊಂದಿದ್ದಾರೆ.
ಚುನಾವಣೆಯಲ್ಲಿ ಜಯಗಳಿಸಿದ ಬಳಿಕ ಶಾಸಕರು ಒಮ್ಮೆಯೂ ಇತ್ತ ಸುಳಿದಿಲ್ಲ. ರೈತರ ಪ್ರತಿಭಟನೆ ಸಂದರ್ಭದಲ್ಲೂ ಬಂದಿಲ್ಲ. ಐದು ವರ್ಷಕ್ಕೊಮ್ಮೆ, ಚುನಾವಣೆಗೆ ಮಾತ್ರ ಭೇಟಿ ನೀಡುವ ಶಾಸಕರು, ಜನಪ್ರತಿನಿಧಿಗಳು ಯಾಕಾಗಿ ಬೇಕು ಎಂದು ಸ್ಥಳೀಯ ರೈತ ರಾಧೇ ಶ್ಯಾಮ್ ತ್ಯಾಗಿ ಪ್ರಶ್ನಿಸಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆಗೆ ನಿಷೇಧ ಹೇರಲು ಸಮಾಜವಾದಿ ಪಕ್ಷ ಒತ್ತಾಯ
ಆರ್‌ಎಲ್‌ಡಿ ಪಕ್ಷದ ನಾಯಕರು ಗ್ರಾಮಕ್ಕೆ ಆಗಾಗ ಭೇಟಿ ನೀಡುತ್ತಾರೆ. ಜನರೊಡನೆ ಸಮಯ ಕಳೆಯುತ್ತಾರೆ. ಹೀಗಾಗಿ ಅವರಿಗೆ ಮಾತ್ರ ಪ್ರವೇಶ ನೀಡುತ್ತೇವೆ ಎಂದು ಸ್ಥಳೀಯರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ: ಕೇಶವ ಪ್ರಸಾದ್ ಮೌರ್ಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.