ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ವಂಚನೆ ಯತ್ನ: ₹ 62,476 ಕೋಟಿ ಚೀನಾಗೆ ರವಾನೆ ಮಾಡಿದ ವಿವೊ

Last Updated 7 ಜುಲೈ 2022, 13:49 IST
ಅಕ್ಷರ ಗಾತ್ರ

ನವದೆಹಲಿ: ಚೀನಾ ಮೂಲದ ಪ್ರಮುಖ ಸ್ಮಾಟ್‌ಫೋನ್‌ ತಯಾರಕ ಸಂಸ್ಥೆಯಾಗಿರುವ ವಿವೊ, ಭಾರತದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು ತನ್ನ ವಹಿವಾಟಿನ ಶೇ 50ರಷ್ಟು ಮೊತ್ತ, ಅಂದರೆ ಸುಮಾರು ₹ 62,476 ಕೋಟಿಯನ್ನು ಚೀನಾಗೆ ರವಾನಿಸಿದೆ.

’ಸಂಸ್ಥೆಯು ವಿವಿಧ ಬ್ಯಾಂಕ್‌ಗಳ 119 ಖಾತೆಗಳಲ್ಲಿ ಇರಿಸಿದ್ದ ಸುಮಾರು ₹ 465 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಇದರಲ್ಲಿ ₹ 73 ಲಕ್ಷ ನಗದು, 2 ಕೆ.ಜಿ. ತೂಕದ ಚಿನ್ನದಗಟ್ಟಿ ಸೇರಿದೆ‘ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ತಿಳಿಸಿದೆ.

ವಿವೊ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ23 ಕಂಪನಿಗಳ ಮೇಲೆ ಇ.ಡಿ ಜುಲೈ 5ರಂದು ದಾಳಿ ನಡೆಸಿತ್ತು.

ವಿವಿಧ ಕಂಪನಿಗಳ ವಿಲೀನ ಪ್ರಕ್ರಿಯೆ ನಂತರ ವಿವೊದ ಮಾಜಿ ನಿರ್ದೇಶಕ ಬಿನ್‌ ಲೂ ಅವರು 2018ರಲ್ಲಿ ಭಾರತದಿಂದ ನಿರ್ಗಮಿಸಿದ್ದರು. ಆಗ ವಿಲೀನಗೊಂಡಿದ್ದ ಕಂಪನಿಗಳ ವಹಿವಾಟುಗಳನ್ನೂ ಈಗ ಪರಿಶೀಲಿಸಲಾಗುತ್ತಿದೆ ಎಂದು ಇ.ಡಿ ತಿಳಿಸಿದೆ.

ಚೀನಾದ ಕೆಲ ಪ್ರಜೆಗಳನ್ನು ಒಳಗೊಂಡಂತೆ ವಿವೊ ಇಂಡಿಯಾದ ಸಿಬ್ಬಂದಿ, ತಪಾಸಣೆ ಪ್ರಕ್ರಿಯೆಗೆ ಸಹಕಾರ ನೀಡದೇ ತಲೆಮರೆಸಿಕೊಂಡಿದ್ದರು. ಅಲ್ಲದೆ ಡಿಜಿಟಲ್ ಪರಿಕರಗಳನ್ನು ನಿಸ್ತೇಜಗೊಳಿಸಲು, ಇಲ್ಲವೇ ಅವಿತಿಡಲು ಮುಂದಾಗಿದ್ದರು. ಆ ಪರಿಕರಗಳನ್ನು ಜಪ್ತಿ ಮಾಡಲಾಗಿದೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT