ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರು ಆಧಾರ್‌ ಜೋಡಿಸದಿದ್ದರೂ ಮತದಾನ: ಕೇಂದ್ರ ಸರ್ಕಾರ

Last Updated 17 ಡಿಸೆಂಬರ್ 2022, 4:57 IST
ಅಕ್ಷರ ಗಾತ್ರ

ನವದೆಹಲಿ: ಮತದಾರರ ಗುರುತಿನ ಚೀಟಿ ಜೊತೆ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡದವರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಇದು ಸ್ವ–ಇಚ್ಛೆಯಿಂದ ನಡೆಯುವ ಪ್ರಕ್ರಿಯೆ ಎಂದೂ ಹೇಳಿದೆ.

ಮತದಾರರ ಗುರುತಿಗಾಗಿ ಅವರಿಂದ (ಸ್ವ–ಇಚ್ಛೆಯ ನೆಲೆಯಲ್ಲಿ) ಆಧಾರ್‌ ಸಂಖ್ಯೆ ಪಡೆಯಲು2021ರ ಚುನಾವಣಾ ಕಾನೂನುಗಳ (ತಿದ್ದುಪಡಿ) ಕಾಯ್ದೆಯು ಚುನಾವಣಾ ನೋಂದಣಿ ಅಧಿಕಾರಿಗಳಿಗೆ ಅನುಮತಿ ನೀಡಿದೆ ಎಂದು ಕಾನೂನು ಸಚಿವ ಕಿರಣ್‌ ರಿಜಿಜು ಲೋಕಸಭೆಗೆ ತಿಳಿಸಿದ್ದಾರೆ.

95 ಕೋಟಿ ಮತದಾರರ ಪೈಕಿ 54 ಕೋಟಿಗಿಂತಲೂ ಅಧಿಕ ಮತದಾರರು ತಮ್ಮ ಆಧಾರ್‌ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಣೆ ಮಾಡಲು ಒಪ್ಪಿದ್ದಾರೆ ಎಂದೂ ಕಿರಣ್‌ ರಿಜಿಜು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT