ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಬಿಟ್ಟು ಹೊಸ ಕ್ಷೇತ್ರದತ್ತ ಯುದ್ಧ: ಅಜಿತ್ ಡೊಭಾಲ್

Last Updated 28 ಅಕ್ಟೋಬರ್ 2021, 10:56 IST
ಅಕ್ಷರ ಗಾತ್ರ

ಪುಣೆ: ಯುದ್ಧದ ಹೊಸ ಕ್ಷೇತ್ರಗಳು ದೇಶದ ಗಡಿಗಳಿಂದ ನಾಗರಿಕ ಸಮಾಜಗಳಿಗೆ ಸ್ಥಳಾಂತರಗೊಂಡಿವೆ. ಜನರ ಆರೋಗ್ಯ, ಯೋಗಕ್ಷೇಮ, ಭದ್ರತೆಯಂತಹ ಅಂಶಗಳು ಇದರ ಮೇಲೆ ಪರಿಣಾಮ ಬೀರುತ್ತವೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ಹೇಳಿದರು.

ಪುಣೆ ಇಂಟರ್‌ ನ್ಯಾಷನಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿದ್ದ ಸಂವಾದದಲ್ಲಿ ‘ವಿಪತ್ತುಗಳು ಮತ್ತು ಸಾಂಕ್ರಾಮಿಕ ಕಾಯಿಲೆ ಯುಗದಲ್ಲಿ ರಾಷ್ಟ್ರೀಯ ಭದ್ರತಾ ಸನ್ನದ್ಧತೆ’ ಕುರಿತು ಮಾತನಾಡಿದ ಅವರು, ವಿಪತ್ತುಗಳು ಮತ್ತು ಸಾಂಕ್ರಾಮಿಕ ರೋಗಗಳನ್ನು ಪ್ರತ್ಯೇಕವಾಗಿ ನಿಭಾಯಿಸಲು ಸಾಧ್ಯವಿಲ್ಲ ಎಂದರು.

ಜಾಗತಿಕ ಭದ್ರತಾ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ನಮಗೆಲ್ಲರಿಗೂ ಅರಿವಿದೆ. ರಾಷ್ಟ್ರಗಳ ರಾಜಕೀಯ ಮತ್ತು ಮಿಲಿಟರಿ ಉದ್ದೇಶಗಳನ್ನು ಸಾಧಿಸಲು ಯುದ್ಧಗಳು ಹೆಚ್ಚು ವೆಚ್ಚದಾಯಕವಾಗಿ ಪರಿಣಮಿಸಿವೆ ಎಂದರು.

‘ಯುದ್ಧದ ಹೊಸ ಕ್ಷೇತ್ರಗಳು ಗಡಿಗಳಿಂದ ನಾಗರಿಕ ಸಮಾಜಗಳಿಗೆ ಸ್ಥಳಾಂತರಗೊಂಡಿವೆ. ಸಾಮಾನ್ಯ ಜನರ ಆಲೋಚನೆ, ಅವರ ಗ್ರಹಿಕೆ, ಆರೋಗ್ಯ, ಯೋಗಕ್ಷೇಮದ ಪ್ರಜ್ಞೆ ಮತ್ತು ಸರ್ಕಾರದ ಗ್ರಹಿಕೆಯು ಈ ನಿಟ್ಟಿನಲ್ಲಿ ಹೊಸ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ’ ಎಂದು ಡೊಭಾಲ್‌ ಹೇಳಿದರು.

ಈ ಎಲ್ಲಾ ಅಂಶಗಳು ಒಟ್ಟಾರೆಯಾಗಿ ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತವೆ ಎಂದ ಅವರು, ಮಾಹಿತಿ ಕ್ರಾಂತಿ ಯುಗದಲ್ಲಿ ಸುಳ್ಳು ಮತ್ತು ಪ್ರೇರಿತ ಪ್ರಚಾರದಿಂದ ಜನರನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ರಾಷ್ಟ್ರೀಯ ಭದ್ರತಾ ಯೋಜನೆಯು ಈ ಎಲ್ಲಾ ಸವಾಲುಗಳು ಮತ್ತು ಕಾರ್ಯತಂತ್ರಗಳನ್ನು ಒಳಗೊಂಡಿರಬೇಕು. ಇದಕ್ಕೆ ಗರಿಷ್ಠ ಪ್ರಮಾಣದಲ್ಲಿ ಅಂತರರಾಷ್ಟ್ರೀಯ ಸಹಕಾರದ ಅಗತ್ಯವಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT