ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಿಯ ಸಮಸ್ಯೆಗಳಿಗೆ ಪರಿಹಾರ ಎದರು ನೋಡುತ್ತಿದ್ದೇವೆ: ಹರಿ ಕುಮಾರ್‌

Last Updated 4 ಮಾರ್ಚ್ 2023, 16:00 IST
ಅಕ್ಷರ ಗಾತ್ರ

ನವದೆಹಲಿ: ‘ಕಡಲ ಪ್ರದೇಶಕ್ಕೆ ಸಂಬಂಧಿಸಿದ ಸದ್ಯದ ಸವಾಲುಗಳಿಗೆ ಸಮಾನ ಮನಸ್ಕ ದೇಶಗಳು ಒಟ್ಟುಸೇರಿ ವಿಷಯಾಧಾರಿತವಾಗಿ ಪರಿಹಾರ ಕಂಡುಕೊಳ್ಳಬೇಕು’ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್‌ ಆರ್‌. ಹರಿ ಕುಮಾರ್‌ ಅವರು ಶನಿವಾರ ಒತ್ತಿ ಹೇಳಿದರು.

ಪ್ರಾದೇಶಿಕ ಸಮಸ್ಯೆಗಳಿಗೆ ಪ್ರಾದೇಶಿಕವಾಗಿ ಪರಿಹಾರ ಕಂಡುಕೊಳ್ಳುವುದರಿಂದ ಆಗುವ ಪ್ರಯೋಜನಗಳನ್ನೂ ಈ ವೇಳೆ ಎತ್ತಿಹಿಡಿದರು.

ರೈಸಿನಾ ಡೈಲಾಗ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದ ಕಡಲ ಪ್ರದೇಶದ ನೀತಿಗಳು ಗೌರವ, ಪರಸ್ಪರ ಚರ್ಚೆ, ಶಾಂತಿ ಮತ್ತು ಸಮೃದ್ಧಿ ನೀತಿಯ ಮೇಲೆ ನಿಂತಿದೆ.

ಜೊತೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ಸಾಗರ್‌ (ಪ್ರದೇಶದ ಎಲ್ಲರ ಭದ್ರತೆ ಮತ್ತು ಬೆಳವಣಿಗೆ) ಎಂಬ ದೂರದೃಷ್ಟಿಯಿಂದ ಪ್ರೇರೇಪಿತವಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT