ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಪಾಂಚಜನ್ಯ ಲೇಖನಕ್ಕೂ ಸಂಘಕ್ಕೂ ಸಂಬಂಧವಿಲ್ಲ: ಆರ್‌ಎಸ್‌ಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಇನ್ಫೊಸಿಸ್ ಸಂಸ್ಥೆಯು ಭಾರತದ ಆರ್ಥಿಕತೆಯನ್ನು ಅಸ್ತ್ಯವ್ಯಸ್ತಗೊಳಿಸಲು ಉದ್ದೇಶಪೂರ್ವಕವಾಗಿ ಯತ್ನಿಸುತ್ತಿದೆ ಎಂಬ ಆರ್‌ಎಸ್‌ಎಸ್‌ ಜೊತೆ ಗುರುತಿಸಿಕೊಂಡಿರುವ ಸಾಪ್ತಾಹಿಕ ‘ಪಾಂಚಚನ್ಯ’ದಲ್ಲಿ ಲೇಖನ ಕುರಿತು ಪ್ರತಿಕ್ರಿಯಿಸಲು ಆರ್‌ಎಸ್‌ಎಸ್‌ ನಿರಾಕರಿಸಿದೆ. ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದೆ.

ಆರ್‌ಎಸ್‌ಎಸ್‌ ವಕ್ತಾರ ಸುನಿಲ್‌ ಅಂಬೆಕರ್ ಅವರು, ಜಿಎಸ್‌ಟಿ ಮತ್ತು ಐ.ಟಿ. ಕುರಿತು ಇನ್ಫೊಸಿಸ್‌ ರೂಪಿಸಿರುವ ಪೋರ್ಟಲ್‌ ಕುರಿತು ವಿವಾದವಿದ್ದು, ಅದನ್ನೇ ಪಾಂಚಜನ್ಯ ಲೇಖನದಲ್ಲಿ ಬಿಂಬಿತವಾಗಿದೆ. ಇದು, ವ್ಯಕ್ತಿಗತ ಹೇಳಿಕೆ. ಸಂಘಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ.. ಇನ್ಫೊಸಿಸ್‌ನಿಂದಾಗಿ ಸರ್ಕಾರದ ವಿಶ್ವಾಸಕ್ಕೆ ಧಕ್ಕೆ: ಆರ್‌ಎಸ್‌ಎಸ್ ಮುಖವಾಣಿ ಕಿಡಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು