ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಜಾಬ್‌: ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಿಗಷ್ಟೇ ಬಾರ್‌, ಜಿಮ್‌ನಲ್ಲಿ ಅವಕಾಶ

ವಾರಾಂತ್ಯ ಹಾಗೂ ರಾತ್ರಿ ಕರ್ಫ್ಯೂ ನಿರ್ಬಂಧ ತೆರವು
ಅಕ್ಷರ ಗಾತ್ರ

ಚಂಡೀಗಡ: ಕೋವಿಡ್‌ ಪ್ರಕರಣಗಳ ನಿಯಂತ್ರಣ ಸಲುವಾಗಿ ರಾಜ್ಯದಲ್ಲಿ ಹೇರಲಾಗಿದ್ದ ವಾರಾಂತ್ಯ ಮತ್ತು ರಾತ್ರಿ ಕರ್ಫ್ಯೂ ನಿರ್ಬಂಧವನ್ನು ತೆಗೆದುಹಾಕಲಾಗಿದೆ ಎಂದು ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ತಿಳಿಸಿದ್ದಾರೆ.

ರಾಜ್ಯ ಸರ್ಕಾರದಆದೇಶದ ಪ್ರಕಾರ, ಕನಿಷ್ಠ ಒಂದು ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವವರಿಗೆ ಮಾತ್ರವೇ ಅವಕಾಶ ನೀಡಿ ಬಾರ್‌, ಚಿತ್ರಮಂದಿರ, ಮಾಲ್‌, ರೆಸ್ಟೋರೆಂಟ್‌, ಜಿಮ್‌, ಸ್ಪಾ ಮತ್ತು ಇತರ ವಾಣಿಜ್ಯ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.ಅಷ್ಟಲ್ಲದೆ, ಮಾರ್ಗಸೂಚಿಗೆ ಅನುಗುಣವಾಗಿ ತರಬೇತಿ ಕೇಂದ್ರಗಳು ಮತ್ತು ಕಾಲೇಜುಗಳನ್ನೂ ತೆರೆಯಬಹುದಾಗಿದ್ದು, ಶಾಲೆಗಳನ್ನು ತೆರೆಯಲು ಸದ್ಯ ಅವಕಾಶವಿಲ್ಲಎನ್ನಲಾಗಿದೆ.

ಮುಖ್ಯಮಂತ್ರಿ ಕಚೇರಿಯಿಂದ ಪ್ರಕಟವಾಗಿರುವ ಆದೇಶದ ಪ್ರಕಾರ, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಎರಡು ವಾರಗಳ ಹಿಂದೆಯೇ ಕನಿಷ್ಠ ಒಂದು ಡೋಸ್‌ ಲಸಿಕೆ ಪಡೆದುಕೊಂಡಿರುವ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ಪ್ರಮಾಣಪತ್ರ ನೀಡಿದ ಬಳಿಕ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ತೆರೆಯಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT