ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಶೇ 25 ಅಭ್ಯರ್ಥಿಗಳಿಗೆ ಅಪರಾಧ ಹಿನ್ನೆಲೆ

Last Updated 19 ಮಾರ್ಚ್ 2021, 21:53 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಇದೇ 27ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ 191 ಅಭ್ಯರ್ಥಿಗಳ ಪೈಕಿ 48 ಮಂದಿಯ ವಿರುದ್ಧ ಅಪರಾಧ ಪ್ರಕರಣಗಳಿವೆ. ಇದು ಒಟ್ಟು ಅಭ್ಯರ್ಥಿಗಳಲ್ಲಿ ಶೇ 25ಕ್ಕೂ ಸ್ವಲ್ಪ ಹೆಚ್ಚು ಎಂದು ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ವರದಿ ಹೇಳಿದೆ.

ಈ 48 ಅಭ್ಯರ್ಥಿಗಳ ಪೈಕಿ 42 ಅಭ್ಯರ್ಥಿಗಳ ವಿರುದ್ಧ ಗಂಭೀರವಾದ ಅಪರಾಧ ಆರೋಪಗಳೇ ದಾಖಲಾಗಿವೆ.

12 ಅಭ್ಯರ್ಥಿಗಳ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳಿವೆ. ಇವರಲ್ಲಿ ಒಬ್ಬರ ಮೇಲೆ ಅತ್ಯಾಚಾರ ಆರೋಪ ಇದೆ. ಎಂಟು ಅಭ್ಯರ್ಥಿಗಳ ಮೇಲೆ ಕೊಲೆ ಆರೋಪವಿದ್ದರೆ 19 ಮಂದಿಯ ಮೇಲೆ ಕೊಲೆ ಯತ್ನದ ಆರೋಪಗಳಿವೆ.ಸಿಪಿಎಂನ 9, ಬಿಜೆಪಿಯ 11, ಟಿಎಂಸಿಯ 8, ಕಾಂಗ್ರೆಸ್‌ನ 1, ಬಿಎಎಸ್‌ಪಿಯ 1 ಮತ್ತು ಎಸ್‌ಯುಸಿಐನ 2 ಅಭ್ಯರ್ಥಿಗಳು ಅಪರಾಧ ಪ್ರಕರಣಗಳಲ್ಲಿ ಆರೋಪಿ ಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT