ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಕಿಡಿ: ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ-ನಾಯಕರು ಏನಂದ್ರು?

Last Updated 23 ಜನವರಿ 2022, 19:31 IST
ಅಕ್ಷರ ಗಾತ್ರ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಸ್ಥಿತಿಯು ಶೋಚನೀಯವಾಗಿದೆ. ಆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯು ಕೆಲವೇ ತಾಸುಗಳಲ್ಲಿ ತಮ್ಮ ನಿಲುವು ಬದಲಿಸಿಕೊಂಡರು. ಜನರು ತಮ್ಮ ಮತಗಳನ್ನು ಕಾಂಗ್ರೆಸ್‌ಗೆ ನೀಡಿ ವ್ಯರ್ಥ ಮಾಡದಿರುವುದು ಒಳ್ಳೆಯದು. ಎಲ್ಲರೂ ಬಿಎಸ್‌ಪಿಗೆ ಮತ ಹಾಕಬೇಕು

ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

***

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌, ಎಸ್‌ಪಿ, ಬಹುಜನ ಸಮಾಜ ಪಕ್ಷ ಎಲ್ಲವಕ್ಕೂ ಒಟ್ಟಾಗಿ ನೂರು ಕ್ಷೇತ್ರಗಳೂ ಸಿಗುವುದಿಲ್ಲ.ಬಿಜೆಪಿಗೆ ಶೇ 50ಕ್ಕೂ ಹೆಚ್ಚು ಮತಗಳು ದೊರೆಯಲಿವೆ. ಈ ಹಿಂದಿನ ಎಲ್ಲ ದಾಖಲೆಗಳು ಮುರಿಯಲಿವೆ

- ದಿನೇಶ್‌ ಶರ್ಮಾ, ಉತ್ತರ ಪ್ರದೇಶ ಉಪಮುಖ್ಯಮಂತ್ರಿ

***

ಸತ್ಯೇಂದ್ರ ಜೈನ್‌ (ದೆಹಲಿಯ ಸಚಿವ) ಅವರನ್ನು ಜಾರಿ ನಿರ್ದೇಶನಾಲಯವು ಪಂಜಾಬ್‌ ಚುನಾವಣೆಗೆ ಮುನ್ನ ಬಂಧಿಸಲಿದೆ ಎಂಬ ಮಾಹಿತಿ ಸಿಕ್ಕಿದೆ. ಈ ಹಿಂದೆಯೂ, ಜೈನ್‌ ಅವರಿಗೆ ಸೇರಿದ ಸ್ಥಳಗಳಲ್ಲಿ ಕೇಂದ್ರದ ಸಂಸ್ಥೆಗಳು ಶೋಧ ನಡೆಸಿದ್ದವು. ಚುನಾವಣೆ ಇರುವುದರಿಂದ ದಾಳಿ, ಬಂಧನ ಆಗಲಿವೆ. ಇಂತಹ ದಾಳಿ, ಬಂಧನಕ್ಕೆ ಹೆದರುವುದಿಲ್ಲ. ಏಕೆಂದರೆ, ನಾವು ತಪ್ಪು ಮಾಡಿಲ್ಲ

- ಅರವಿಂದ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

***

ಒಬಿಸಿ ಸಮುದಾಯವನ್ನು ಪ್ರತಿನಿಧಿಸುತ್ತಿದ್ದ ಸಚಿವರು ಪಕ್ಷ ಬಿಟ್ಟಿರುವುದರಿಂದ ಬಿಜೆಪಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅನನುಕೂಲ ಆಗದು. ಅವರೆಲ್ಲರೂ ಸ್ವ ಹಿತಾಸಕ್ತಿಗಾಗಿ ಪಕ್ಷ ಬಿಟ್ಟಿದ್ಧಾರೆ. ಅವರಿಗೆ ಯಾವುದೇ ಸಿದ್ಧಾಂತ ಇಲ್ಲ. ಪಕ್ಷಾಂತರಿಗಳ ಜತೆಗೆ ಮತದಾರರು ಹೋದ ಬಗ್ಗೆ ನನಗೆ ಮಾಹಿತಿ ಇಲ್ಲ

- ಕೇಶವ ಪ್ರಸಾದ್‌ ಮೌರ್ಯ, ಉತ್ತರ ಪ್ರದೇಶ ಉಪಮುಖ್ಯಮಂತ್ರಿ

ಆಧಾರ: ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT