ಶನಿವಾರ, ಮೇ 21, 2022
23 °C

ದೇಶದಲ್ಲಿ ಏರುತ್ತಿರುವ ಬೆಲೆ ನಿಯಂತ್ರಣಕ್ಕೆ ಗೋಧಿ ರಫ್ತು ನಿಷೇಧ: ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಏರಿಕೆಯಾಗಿರುವ ಗೋಧಿ ಮತ್ತು ಗೋಧಿ ಹಿಟ್ಟಿನ ಬೆಲೆ ಇಳಿಸುವ ಉದ್ದೇಶದಿಂದ ಸರ್ಕಾರ ಗೋಧಿ ರಫ್ತು ನಿಷೇಧಿಸಿದೆ. ಈ ಕ್ರಮದಿಂದಾಗಿ ಒಂದು ವಾರದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ಆಹಾರ ಇಲಾಖೆ ಕಾರ್ಯದರ್ಶಿ ಸುಧಾಂಶು ಪಾಂಡೆ ಶನಿವಾರ ಹೇಳಿದ್ದಾರೆ.

ಗೋಧಿ ಮತ್ತು ಗೋಧಿ ಹಿಟ್ಟಿನ ಚಿಲ್ಲರೆ ಮಾರಾಟದ ಬೆಲೆಗಳು ಕಳೆದ ವರ್ಷದಲ್ಲಿ ಶೇಕಡಾ 19 ರಷ್ಟು ಏರಿಕೆಯಾಗಿವೆ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಗೋಧಿ ಉತ್ಪಾದನೆಯಲ್ಲಿ ಸ್ವಲ್ಪ ಕುಸಿತ ಸೇರಿದಂತೆ ಜಾಗತಿಕ ಪೂರೈಕೆಯ ವ್ಯತ್ಯಯದಿಂದಾಗಿ ಜಾಗತಿಕವಾಗಿ ಗೋಧಿ ಬೆಲೆ ತೀವ್ರವಾಗಿ ಏರಿದೆ ಎಂದು ಅವರು ಹೇಳಿದ್ದಾರೆ. ಅದರ ಪರಿಣಾಮವಾಗಿ, ಗೋಧಿ ಮತ್ತು ಗೋಧಿ ಹಿಟ್ಟಿನ ದೇಶೀಯ ಬೆಲೆಗಳು ಕಳೆದ ತಿಂಗಳಿನಲ್ಲಿ ಏರಿಕೆ ಕಂಡಿವೆ ಎಂದಿದ್ದಾರೆ.

ಶುಕ್ರವಾರ, ವಾಣಿಜ್ಯ ಸಚಿವಾಲಯವು ತಕ್ಷಣವೇ ಜಾರಿಗೆ ಬರುವಂತೆ ಗೋಧಿ ರಫ್ತಿನ ಮೇಲೆ ನಿಷೇಧ ಹೇರಿತ್ತು. ಆದರೂ ಈ ಹಿಂದೆಯೇ ಮಾಡಿಕೊಂಡ ಕೆಲ ಸರಬರಾಜು ಒಪ್ಪಂದಗಳ ಅನ್ವಯ ರಫ್ತಿಗೆ ಅವಕಾಶ ನೀಡಿತ್ತು.

ಈ ಆರ್ಥಿಕ ವರ್ಷದಲ್ಲಿ ಇದುವರೆಗೆ 45 ಲಕ್ಷ ಟನ್ ಗೋಧಿ ರಫ್ತಿಗೆ ದೇಶವು ಒಪ್ಪಂದ ಮಾಡಿಕೊಂಡಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಅದರಲ್ಲಿ 10.46 ಲಕ್ಷ ಟನ್‌ ಏಪ್ರಿಲ್‌ನಲ್ಲಿ ರಫ್ತು ಮಾಡಲಾಗಿದೆ.

ಇದನ್ನೂ ಓದಿ.. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು