ಶುಕ್ರವಾರ, ಅಕ್ಟೋಬರ್ 7, 2022
24 °C

ಕಡಲ ಹಿತಾಸಕ್ತಿ ರಕ್ಷಣೆ: ಚಿಂತನೆಯ ಮಿತಿಯನ್ನು ಭಾರತ ದಾಟಬೇಕಿದೆ –ಸಚಿವ ಜೈಶಂಕರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ‘ಪ್ರಸಕ್ತ ಜಾಗತಿಕ ವಿದ್ಯಮಾನಗಳಲ್ಲಿ ಹಿಂದೂಮಹಾಸಾಗರ–ಪೆಸಿಫಿಕ್ ಪ್ರದೇಶ ಎಂಬುದು ವ್ಯೂಹಾತ್ಮಕವಾಗಿ ಹೊಸ ಪರಿಕಲ್ಪನೆಯಾಗಿ ರೂಪುಗೊಳ್ಳುತ್ತಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಭಾನುವಾರ ಹೇಳಿದರು.

‘ಕಡಲಿಗೆ ಸಂಬಂಧಿಸಿದ ಭಾರತದ ಹಿತಾಸಕ್ತಿಯ ಸಂರಕ್ಷಣೆ ಕುರಿತು ಚರ್ಚಿಸುವಾಗ ಪೆಸಿಫಿಕ್‌ ಸಾಗರವನ್ನು ಪ್ರಸ್ತಾಪಿಸದೇ, ಹಿಂದೂಮಹಾಸಾಗರದ ಬಗ್ಗೆ ಮಾತ್ರ ಮಾತನಾಡುವುದನ್ನು ಒಪ್ಪಲಾಗದು. ಈ ರೀತಿಯ ಚರ್ಚೆ ನಮ್ಮ ಚಿಂತನೆಯ ಮಿತಿಯನ್ನು ತೋರುತ್ತದೆ. ಭಾರತವು ಇಂಥ ಮಿತಿಯನ್ನು ದಾಟಬೇಕಿದೆ’ ಎಂದು ಅವರು ಹೇಳಿದರು.

ಗುಜರಾತಿ ಭಾಷೆಗೆ ಅನುವಾದಗೊಂಡಿರುವ ತಮ್ಮ ‘ದಿ ಇಂಡಿಯಾ ವೇ: ಸ್ಟ್ರಾಟಜೀಸ್ ಫಾರ್ ಆ್ಯನ್ ಅನ್‌ಸರ್ಟನ್ ವರ್ಲ್ಡ್’ ಕೃತಿಯ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತವು ಇತರ ದೇಶಗಳ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು ಎಂಬ ನಂಬಿಕೆ ಆಳವಾಗಿ ಬೇರೂರಿದೆ. ಈ ಧೋರಣೆ ಕೂಡ ಬದಲಾಗಬೇಕು’ ಎಂದು ಅವರು ಪ್ರತಿಪಾದಿಸಿದರು.

‘ಹಿಂದೂಮಹಾಸಾಗರ ಹಾಗೂ ಪೆಸಿಫಿಕ್‌ ಸಾಗರದ ನಡುವಿನ ಗೆರೆ ಭೂಪಟದಲ್ಲಿ, ಅಟ್ಲಾಸ್‌ಗಳಲ್ಲಿ ಕಾಣಸಿಗುತ್ತದೆ. ವಾಸ್ತವದಲ್ಲಿ ಅಂಥ ರೇಖೆಯೇ ಇಲ್ಲ. ನಮ್ಮ ಹಿತಾಸಕ್ತಿ ಬದಲಾಗಿದೆ. ಹೀಗಾಗಿ ನಮ್ಮ ಚಿಂತನೆಯೂ ಬದಲಾಗುವುದು ಅಗತ್ಯ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು