ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

100 ಕೋಟಿ ಡೋಸ್‌ ಲಸಿಕೆ ಹಂಚಿಕೆ ಮೋದಿಗೆ ಡಬ್ಲ್ಯೂಎಚ್‌ಒ ಮಹಾನಿರ್ದೇಶಕರ ಅಭಿನಂದನೆ

Last Updated 21 ಅಕ್ಟೋಬರ್ 2021, 10:33 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಲಸಿಕೆ ನೀಡುವಲ್ಲಿ ಭಾರತ 100 ಕೋಟಿ ಡೋಸ್‌ ದಾಟಿರುವುದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಮಹಾನಿರ್ದೇಶಕ ಟೆಡ್ರೊಸ್‌ ಅಧಾನಮ್‌ ಘೆಬ್ರೆಯೆಸಸ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

‘ಕೋವಿಡ್‌ ಪಿಡುಗಿನಿಂದ ದುರ್ಬಲ ಜನತೆಯನ್ನು ರಕ್ಷಿಸಲು ಮತ್ತು ಲಸಿಕೆ ಹಂಚಿಕೆಯ ಗುರಿ ತಲುಪಲು ಪ್ರಯತ್ನಿಸಿದ ಪ್ರಧಾನಿ ನರೇಂದ್ರ ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಭಾರತದ ಜನರಿಗೆ ಅಭಿನಂದನೆಗಳು’ ಎಂದು ಟ್ವೀಟ್‌ ಮಾಡಿದ್ದಾರೆ.

ಡಬ್ಲ್ಯೂಎಚ್‌ಒನ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಮ್‌ ಖೇತ್ರಪಾಲ್‌ ಸಿಂಗ್‌ಲಸಿಕೆಯ ಹೆಗ್ಗುರಿತಿನ ಬಗ್ಗೆ ದೇಶವನ್ನು ಅಭಿನಂದಿಸಿದರು.

‘100 ಕೋಟಿ ಡೋಸ್‌ ಲಸಿಕೆ ನೀಡಿದ್ದಕ್ಕೆ ಭಾರತಕ್ಕೆ ಅಭಿನಂದನೆಗಳು. ಬಲವಾದ ನಾಯಕತ್ವ, ಅಂತರ್‌ ವಲಯದ ಒಗ್ಗೂಡಿಸುವಿಕೆ, ಆರೋಗ್ಯ ಮತ್ತು ಮುಂಚೂಣಿ ಕಾರ್ಯಪಡೆಯ ಸಮರ್ಪಕ ಪ್ರಯತ್ನ ಮತ್ತು ಜನರ ಭಾಗವಹಿಸುವಿಕೆ ಇಲ್ಲದೆ ಈ ಅಸಮಾನ್ಯ ಸಾಧನೆ ಸಾಧ್ಯವಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT