ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಅಪಘಾತ: ಸಾವಿನ ಪ್ರಮಾಣ ತಗ್ಗಿಸಲು ಡಬ್ಲ್ಯುಎಚ್‌ಒದಿಂದ ಮಾರ್ಗಸೂಚಿ ಬಿಡುಗಡೆ

Last Updated 11 ಸೆಪ್ಟೆಂಬರ್ 2022, 11:16 IST
ಅಕ್ಷರ ಗಾತ್ರ

ನವದೆಹಲಿ: ರಸ್ತೆ ಅಪಘಾತಗಳ ಸಂದರ್ಭದಲ್ಲಿ ಸಾವುಗಳು ಹಾಗೂ ಗಾಯಗೊಳ್ಳುವುದರ ಪ್ರಮಾಣವನ್ನು ತಗ್ಗಿಸುವುದಕ್ಕೆ ಸಂಬಂಧಿಸಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯುಎಚ್‌ಒ) ಎರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಬೈಕ್‌ ಹಾಗೂ ತ್ರಿಚಕ್ರ ವಾಹನಗಳ ಸವಾರರಿಂದ ಹೆಲ್ಮೆಟ್‌ಗಳ ಸಮರ್ಪಕ ಬಳಕೆ ಹಾಗೂ ಪಾದಚಾರಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ.

ಐಐಟಿ–ದೆಹಲಿ ಹಾಗೂ ಡಬ್ಲ್ಯುಎಚ್‌ಒದ ಸುರಕ್ಷತೆ ಹಾಗೂ ಸಂಚಾರ ಘಟಕ ಜಂಟಿಯಾಗಿ ಈ ಮಾರ್ಗಸೂಚಿಗಳನ್ನು ಸಿದ್ಧಪಡಿಸಿವೆ. ರಸ್ತೆ ಸಂಚಾರ ಮತ್ತು ಸುರಕ್ಷತೆಗೆ ಸಂಬಂಧಿಸಿ ಎಲ್ಲ ರಾಷ್ಟ್ರಗಳು ನೀತಿ ರೂಪಿಸುವಾಗ ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಡಬ್ಲ್ಯುಎಚ್‌ಒ ತಿಳಿಸಿದೆ.

‘ರಸ್ತೆ ಅಪಘಾತಗಳಲ್ಲಿ ಸಂಭವಿಸುತ್ತಿರುವ ಸಾವುಗಳ ಈಗಿನ ಪ್ರಮಾಣವನ್ನು 2030ರ ವೇಳೆಗೆ ಅರ್ಧದಷ್ಟು ಕಡಿಮೆ ಮಾಡಬೇಕಿದೆ. ಇದಕ್ಕಾಗಿ ಸುರಕ್ಷಿತ ಸಂಚಾರ ವ್ಯವಸ್ಥೆಯನ್ನು ರೂಪಿಸಬೇಕು. ಈ ಉದ್ದೇಶ ಈಡೇರಿಕೆಯಲ್ಲಿ ನೂತನ ಮಾರ್ಗಸೂಚಿಗಳು ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಡಬ್ಲ್ಯುಎಚ್ಒದ ಸುರಕ್ಷತೆ ಹಾಗೂ ಸಂಚಾರ ಘಟಕದ ಮುಖ್ಯಸ್ಥ ಡಾ.ಎನ್‌ಹಾನ್ ಟ್ರ್ಯಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT