ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಯಿ ಮೌಲ್ಯ 2014ರ ವರೆಗೆ ಮೋದಿಗೆ ದೇಶದ ಪ್ರತಿಷ್ಠೆಯಾಗಿತ್ತು...ಈಗ? ಪ್ರಿಯಾಂಕಾ

Last Updated 23 ಸೆಪ್ಟೆಂಬರ್ 2022, 15:43 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿತವುಂಟಾಗಿರುವುದಕ್ಕೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಟೀಕಿಸಿದ್ದಾರೆ.

ರೂಪಾಯಿ ಮೌಲ್ಯ ಕುಸಿತವನ್ನು ನರೇಂದ್ರ ಮೋದಿ ಅವರು 2014ರವರೆಗೆ ದೇಶದ ಪ್ರತಿಷ್ಠೆ ಮತ್ತು ಸರ್ಕಾರದ ನೀತಿಗಳೊಂದಿಗೆ ಹೋಲಿಸುತ್ತಿದ್ದರು. ಆದರೆ, ಇಂದು ರೂಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದೆ. ಈಗ ಅವರು ಮೌನವಾಗಿರುವುದೇಕೆ?‘ ಎಂದು ಪ್ರಿಯಾಂಕಾ ಗಾಂಧಿ ಅವರು ಸಾಮಾಜಿಕ ಮಾಧ್ಯಮ ಟ್ವಿಟರ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಗುರುವಾರ 83 ಪೈಸೆ ಕುಸಿದಿತ್ತು. ಏಳು ತಿಂಗಳಲ್ಲಿ ರೂಪಾಯಿ ಒಂದೇ ದಿನದಲ್ಲಿ ಕಂಡ ಅತಿದೊಡ್ಡ ಕುಸಿತ ಇದಾಗಿತ್ತು. ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿಯು ಡಾಲರ್ ಎದುರು ₹ 80.79ರಂತೆ ವಿನಿಮಯಗೊಂಡಿತ್ತು.

ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿ ಹೆಚ್ಚಿಸಿರುವುದು ಹಾಗೂ ಉಕ್ರೇನ್‌ ಬಿಕ್ಕಟ್ಟು ತೀವ್ರಗೊಂಡಿರುವುದು ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿವೆ ಎಂದು ವರ್ತಕರು ತಿಳಿಸಿದ್ದಾರೆ. ಡಾಲರ್‌ ಬಲವರ್ಧನೆ, ದೇಶಿ ಷೇರು ಮಾರುಕಟ್ಟೆಯಲ್ಲಿ ತೇಜಿ ವಹಿವಾಟು ಇಲ್ಲದಿರುವುದು ಕೂಡ ಕುಸಿತಕ್ಕೆ ಕಾರಣ ಎಂದಿದ್ದಾರೆ. ಅಮೆರಿಕದ ಡಾಲರ್ ಎದುರು ರೂಪಾಯಿಯು ಫೆಬ್ರುವರಿ 24ರಂದು ಒಂದೇ ದಿನದಲ್ಲಿ 99 ಪೈಸೆ ಕುಸಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT