ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಾತ ತುಂಬಲಿದ್ದಾರೆಯೇ ಕನ್ಹಯ್ಯಾ, ಜಿಗ್ನೇಶ್?

ಕಾಂಗ್ರೆಸ್‌ಗೆ ಯುವನಾಯಕರ ಆಗಮನ; ಪುನಶ್ಚೇತನದ ಹುರುಪಿನಲ್ಲಿ ಪಕ್ಷ l ಬಿಜೆಪಿ–ಆರ್‌ಎಸ್ಎಸ್‌ ಸಿದ್ಧಾಂತ ವಿರುದ್ಧ ವಾಗ್ದಾಳಿ ನಡೆಸಬಲ್ಲವರ ತಂಡ ಕಟ್ಟುತ್ತಿರುವ ರಾಹುಲ್‌
Last Updated 28 ಸೆಪ್ಟೆಂಬರ್ 2021, 17:56 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್ ಪಕ್ಷದ ತಮ್ಮ ಸಹೋದ್ಯೋಗಿಗಳು ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಸಿದ್ಧಾಂತವನ್ನು ಬಲವಾಗಿ ವಿರೋಧಿಸುತ್ತಿಲ್ಲ ಎಂಬ ಅಸಮಾಧಾನ ಕಾಂಗ್ರೆಸ್‌ ಸಂಸದ ರಾಹುಲ್ ಗಾಂಧಿ ಅವರದ್ದು. ಆದರೆ ಈಗ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಕನ್ಹಯ್ಯಾ ಕುಮಾರ್ ಹಾಗೂ ಜಿಗ್ನೇಶ್ ಮೆವಾನಿ ಅವರುಹಿಂದುತ್ವ ಬ್ರಿಗೇಡ್ ವಿರುದ್ಧ ಕಠಿಣ ನಿಲುವು ಹೊಂದಿದ್ದಾರೆ.

ಕನ್ಹಯ್ಯಾ ಕುಮಾರ್ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖ್ಯಸ್ಥರಾಗಿದ್ದಾಗದೇಶದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾದ ಬಳಿಕ ರಾಷ್ಟ್ರೀಯ ಮಟ್ಟದಲ್ಲಿ ಬೆಳಕಿಗೆ ಬಂದಿದ್ದರು. ಸಿಪಿಐ ತೊರೆದು ಈಗ ಕಾಂಗ್ರೆಸ್ ಸೇರಿದ್ದಾರೆ. ಹೋರಾಟದ ಹಿನ್ನೆಲೆಯಿಂದ ಗುರುತಿಸಿಕೊಂಡಿರುವ ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್ ಮೆವಾನಿ ಪ್ರಮುಖ ದಲಿತ ನಾಯಕರಾಗಿ ಹೊರಹೊಮ್ಮಿದ್ದಾರೆ. ಇವರು ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಚಿಹ್ನೆಯಡಿ ಕಣಕ್ಕಿಳಿಯಲಿದ್ದಾರೆ.

ಬಿಹಾರ ಹಾಗೂ ಗುಜರಾತಿನಲ್ಲಿ ರಾಜಕೀಯವಾಗಿ ಕಳೆಗುಂದುತ್ತಿರುವ ಪಕ್ಷಕ್ಕೆ ಇಬ್ಬರೂ ಯುವ ನಾಯಕರು ಪ್ರಖರ ದನಿಯಾಗಲಿದ್ದಾರೆ ಎಂಬ ವಿಶ್ವಾಸ ಕಾಂಗ್ರೆಸ್‌ನಲ್ಲಿದೆ.ಕನ್ಹಯ್ಯಾ ಅವರ ಕಾಂಗ್ರೆಸ್ ಸೇರ್ಪಡೆಗೆ ಪಕ್ಷದೊಳಗಿನ ಒಂದು ಗುಂಪಿನಿಂದ ಆಕ್ಷೇಪವಿದೆ. ಎಡಪಂಥೀಯ ಯುವ ನಾಯಕರನ್ನು ಪಕ್ಷಕ್ಕೆ ಕರೆತಂದಿರುವುದರ ಹಿಂದಿನ ತರ್ಕವನ್ನು ಹಲವರು ಪ್ರಶ್ನಿಸಿದ್ದಾರೆ.

‘ಅಭಿವೃದ್ಧಿ ಬಗ್ಗೆ ಮಾತನಾಡುವ ನಾಯಕನ ಅಡಿಯಲ್ಲಿ ಯುವಕರಾದ ನಾವು ಕೆಲಸ ಮಾಡಲು ಬಯಸುತ್ತೇವೆ. ನಾವು ಈ ಹಿಂದೆ ದೇಶದ ಜನರಿಗಾಗಿ ಧ್ವನಿ ಎತ್ತಿದ್ದೇವೆ ಮತ್ತು ಅವರನ್ನು ಬಲಪಡಿಸಲು ಮತ್ತು ಅವರ ಧ್ವನಿಯಾಗಲು ಬಯಸುತ್ತೇವೆ’ ಎಂದುಗುಜರಾತ್ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಅವರು ಹೇಳಿದ್ದಾರೆ.

ಕನ್ಹಯ್ಯಾ, ಮೆವಾನಿ ಮತ್ತು ಅಲ್ಪೆಶ್ ಠಾಕೂರ್ ಜೊತೆಯಲ್ಲಿ ಹಾರ್ದಿಕ್ ಪಟೇಲ್ ಅವರು ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು. ಹಾರ್ದಿಕ್ ಮತ್ತು ಠಾಕೂರ್ ಕಾಂಗ್ರೆಸ್ ಸೇರಿದರು. ಆದರೆ ನಂತರ ಸಂಘಟನಾತ್ಮಕ ಸಮಸ್ಯೆಗಳಿಂದ ಅಸಮಾಧಾನಗೊಂಡು ಠಾಕೂರ್ ಬಿಜೆಪಿಗೆ ಹೋದರು.

ಕಳೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೆವಾನಿ ಹಾಗೂ ಕಾಂಗ್ರೆಸ್ ನಡುವೆ ಒಡನಾಟ ಏರ್ಪಡಿಸುವಲ್ಲಿ ಹಾರ್ದಿಕ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಲಾಗಿದೆ.ಕನ್ಹಯ್ಯಾ ಕೂಡ ಹಾರ್ದಿಕ್ ಜೊತೆ ಉತ್ತಮ ಸಮೀಕರಣವನ್ನು ಹೊಂದಿದ್ದು, ಕಾಂಗ್ರೆಸ್‌ಗೆ ಅವರು ಸೇರುವಲ್ಲಿ ರಾಹುಲ್‌ ಹೆಚ್ಚು ಕಾರಣಕರ್ತರು ಎನ್ನಲಾಗಿದೆ.

ಕನ್ಹಯ್ಯಾ, ಮೆವಾನಿಯಂತಹ ಯುವ ನಾಯಕರ ಸೇರ್ಪಡೆಯು ಪಕ್ಷವನ್ನು ಪುನಶ್ಚೇತನಗೊಳಿಸುತ್ತದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಜಿತಿನ್ ಪ್ರಸಾದ, ಸುಶ್ಮಿತಾ ದೇವ್ ಮತ್ತು ಪ್ರಿಯಾಂಕಾ ಚತುರ್ವೇದಿಯಂತಹ ಹಲವಾರು ಯುವ ನಾಯಕರ ನಿರ್ಗಮನದಿಂದ ಉಂಟಾದ ನಿರ್ವಾತವನ್ನು ತುಂಬಲಿದೆ ಎಂದು ನಂಬಲಾಗಿದೆ.

ಆದರೆ ಕನ್ಹಯ್ಯ ಕಾಂಗ್ರೆಸ್ ಸೇರ್ಪಡೆಗೂ ಮುನ್ನ ಅವರು ಸಿಪಿಐ ನಾಯಕತ್ವದ ಜೊತೆ ಹೊಂದಿದ್ದ ಭಿನ್ನಮತದಿಂದ ಸುದ್ದಿಯಲ್ಲಿದ್ದರು. ಕನ್ಹಯ್ಯ ಅವರು ಕಮ್ಯುನಿಸ್ಟ್ ಪಕ್ಷದಲ್ಲಿ ಉನ್ನತ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದರು ಎಂಬ ಆರೋಪವಿದೆ. ಆದರೆ ಅವರ ಆಪ್ತರು ಇದನ್ನು
ಅಲ್ಲಗಳೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT